Select Your Language

Notifications

webdunia
webdunia
webdunia
webdunia

ರೈತರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತನ್ನ ಕೊಡ್ತೇವೆ - ಸಿಎಂ

ರೈತರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತನ್ನ ಕೊಡ್ತೇವೆ - ಸಿಎಂ
bangalore , ಸೋಮವಾರ, 30 ಜನವರಿ 2023 (14:14 IST)
ವಿಧಾನ ಸೌಧದ ಆವರಣದಲ್ಲಿರುವ ಮಹಾತ್ಮ  ಗಾಂಧೀಜಿ ಪ್ರತಿಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ‌ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಸ್ಮರಣಾರ್ಥವಾಗಿ ಮಾಲಾರ್ಪಣೆ ಮಾಡಿದ್ರು.ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದ್ರು.ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ ಸುಧಾಕರ್, ಸಿ.ಟಿ ರವಿ, ಸುರೇಶ್ ಕುಮಾರ್, ಕುಡುಚಿ ರಾಜೀವ್, ಸಿದ್ದು ಸವದಿ ಸೇರಿದಂತೆ ಹಲವರು ಉಪಸ್ಥಿತರಿದ್ರು.
 
ಇನ್ನೂ ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಗಾಂಧೀಜಿಯವ ಸ್ಮರಣೆ ಮಾಡಿಕೊಂಡು ಮೌನಚಾರಣೆಯನ್ನು ಆಚರಣೆ ಮಾಡಿದ್ದೇವೆ.ಗಾಂಧೀಜಿ ಅವರ ಜೀವನವೇ ಸಂದೇಶ.ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ರು.ತಮ್ಮನ್ನ ತಾವೇ ಸದಾಕಾಲ ಪರೀಕ್ಷೆಗೆ ಒಳಪಡಿಸಿಕೊಂಡವರು.ಅಹಿಂಸೆಯಲ್ಲಿ ದೇಶಕ್ಕೆ ಸ್ವಾತಂತ್ರ ಕೊಡಿಸಿದವರು.ಅನೇಕರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ.ಸುಭಾಷ್ ಚಂದ್ರ, ಭಗತ್ ಸಿಂಗ್ ಸೇರಿದಂತೆ ಹಲವು ನಾಯಕರು ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.ಗಾಂಧೀಜಿ ತತ್ವ ಆದರ್ಶ ಮೇಲೆವಸಾರ್ವಜನಿಕ ಜೀವನದಲ್ಲಿ ನೈತಿಕತೆ ಬರಬೇಕು.ಈ ದೇಶದಕ್ಕೆ ಬಹಳ ಚರಿತ್ರೆ‌ ಇದೆ. ಸ್ವಾತಂತ್ರ್ಯ ಹೋರಾಟ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಹೇಳಿದ್ರು.
 
ಅಲ್ಲದೆ ಈ ವೇಳೆ ಬಜೆಟ್ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು,ಇದೊಂದು ಜನಪರವಾದ ಬಜೆಟ್ ಆಗಲಿದೆ.ರೈತರು, ಮಜಿಳೆಯರು ದೀನ ದಲಿತರು, ಹಿಂದುಳಿದವರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತನ್ನು ಕೊಡುತ್ತೇವೆ.ಅವರಗೆ ಸೂಕ್ತವಾದ ಮೂಲಭೂತ ಹಕ್ಕುಗಳನ್ನ ಕೊಡುತ್ತೇವೆ ಅಂತಾ ಹೇಳಿದ್ರು.ಸಚಿವ ಸಂಪುಟ ಮುಗಿದ ಅಧ್ಯಾಯನ ಅನ್ನೋ ಪ್ರಶ್ನೆಗೂ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಸಚಿವ ಸಂಪುಟಕ್ಕೆ ನೀವೇ ಹೆಚ್ಚು ಮಹತ್ವ ಚರ್ಚೆ ಮಾಡ್ತಿದ್ದೀರಾ ದೆಹಲಿಗೆ ಹೋಗಿ ಏನು ಹೇಳಬೇಕೋ ಅದನ್ನ ಹೇಳಿದ್ದೇನೆ.ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತಾ ಅವರು ಹೇಳಿದ್ದಾರೆ ಎಂದು ಸಿಎಂ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಯುನಿವರ್ಸಿಟಿ ಪ್ರವೇಶ ಪರೀಕ್ಷೆಗೆ ಅವಕಾಶವಿಲ್ಲ : ತಾಲಿಬಾನ್