10ನೇ ದಿನಕ್ಕೆ ರಾಜ್ಯ ರೈತ ಸಂಘದ ಪ್ರತಿಭಟನೆ ಕಾಲಿಟ್ಟಿದೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬುಬೆಳೆಗಾರರು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅರೆ ಬೆತ್ತಲೆಯಾಗಿ ತಲೆ ಮೇಲೆ ಕಲ್ಲು ಎತ್ತಿಕೊಂಡು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದು,ಕಳೆದ ಹತ್ತು ದಿನಗಳಿಂದ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.ಸರ್ಕಾರಕ್ಕೆ ನಾಳೆ ಸಂಜೆಯವರೆಗೂ ಕುರುಬೂರು ಶಾಂತಕುಮಾರ್ ಡೆಡ್ ಲೈನ್ ಕೊಟ್ಟಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ಸಿದ್ದ ಎಂದು ರೈತರು ಹೇಳಿದ್ದಾರೆ
ಕಬ್ಬಿನ ಎಫ್ ಆರ್ ಪಿ ದರ ಏರಿಕೆಗಾಗಿ ಮುಖ್ಯಮಂತ್ರಿಗೆ ರೈತರು ಮನವಿ ನೀಡಿದ್ದು,ಕಬ್ಬು ದರ ನಿಗದಿಯಾಗಲಿ ಸಕ್ಕರೆ ಕಾರ್ಖಾನೆಗಳ ಸುಲುಗೆ ತಪ್ಪಲಿ ಎಂದು ಕಬ್ಬು ಬೆಳೆಗಾರರು ಪ್ರತಿಭಟನೆ ಕೈಗೊಂಡಿದ್ದು,ಮುಖ್ಯಮಂತ್ರಿ ಪ್ರತಿಭಟನೆಗೆ ಪ್ರತಿಕ್ರಿಯಿಸದಿದ್ದಕ್ಕಾಗಿ ಕಬ್ಬು ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ.