Publish Date: Sat, 18 Nov 2023 (21:00 IST)
Updated Date: Sat, 18 Nov 2023 (20:38 IST)
545 ಮಂದಿಗೆ ಪಿಎಸ್ಐ ಮರು ಪರೀಕ್ಷೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ನಮಗೆ ಹುದ್ದೆ ಭರ್ತಿ ಮಾಡಿಕೊಳ್ಳಬೇಕಾದ ತುರ್ತಿದೆ.ಖಾಲಿ ಇರುವ ಹುದ್ದೆಗಳನ್ನು ಹಾಗೇ ಇಟ್ಟುಕೊಳ್ಳಲು ಸಾಧ್ಯವಿಲ್ಲ.ವಿದ್ಯಾರ್ಥಿಗಳ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಪರೀಕ್ಷೆ ಮಾಡುತ್ತೇವೆ.ಇವತ್ತೂ ಕೂಡ ಸಭೆ ಇದೆ.ಪರೀಕ್ಷೆಯನ್ನು ಕೆಇಎ ಮಾಡಬೇಕಾ ಅಥವಾ ಬೇರೆ ಯಾವುದಾದರೂ ಸಂಸ್ಥೆಗೆ ನೀಡಬೇಕಾ ನೋಡ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.