Select Your Language

Notifications

webdunia
webdunia
webdunia
webdunia

ನಾವು ಅವರ ತರಹ ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ- ಡಿಕೆಶಿ

DK Shivakumar
ಕರಸೇವಕ ಬಂಧನ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆ ‌ನಗರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಗೃಹ ಸಚಿವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.ನಾವು ಯಾರಿಗೂ ತೊಂದರೆ ಕೊಡುವ ಸಂಧರ್ಭ ಇಲ್ಲ.ಪೆಡಿಂಗ್ ಇದ್ದ ಕೇಸ್ ಗಳನ್ನ,ಯಾರು ದೇಶಕ್ಕೆ ರಾಜ್ಯಕ್ಕೆ ಅಗೌರವ, ಅಶಾಂತಿ ಮೂಡಿಸುತ್ತಾರೋ ಕಾನೂನು ರೀತಿಯಲ್ಲಿ ಮೊದಲಿಂದಲೂ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಪಾಪ ಎಲೆಕ್ಷನ್  ಹತ್ರ ಬಂತು ಈಗ, ಏಳು ತಿಂಗಳು ಆಯಿತು ವಿಪಕ್ಷ ನಾಯಕರನ್ನ ಮಾಡಲು ಆಗಿರಲಿಲ್ಲ.ಈಗ ಪಾಪ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಮಾಡುತ್ತಿದ್ದಾರೆ.ಅವರು ಏನು ಬೇಕಾದರೂ ಮಾಡಿಕೊಳ್ಳಲಿ.ಪ್ರಜಾಪ್ರಭುತ್ವದಲ್ಲಿ ಜನ ಉತ್ತರ ಕೊಡ್ತಾರೆ.ನಾವು ಸಹ ಉತ್ತರ ಕೊಡುತ್ತೇವೆ.

ನಾವು ಅವರ  ತರಹ ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ.ಕಾಂಗ್ರೆಸ್ ಕಾರ್ಯಕರ್ತರ ಮೇಲೆ  ಕೇಸ್ ಹಾಕಿದ್ದರು.ಬೆಂಗಳೂರು, ಹುಬ್ಬಳ್ಳಿಯಲ್ಲಿ ಕೇಸ್ ಹಾಕಿದ್ದಾರೆ‌.ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ.ನಾವು ಅವರ ರೀತಿಯಲ್ಲಿ ಮಾಡುವುದಿಲ್ಲ ಹಿಂದೆ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ವಿಪಕ್ಷ ನಾಯಕ ಪೊಲೀಸ್ ಠಾಣೆ ಮುತ್ತಿಗೆ ಹಾಕುವ ವಿಚಾರವಾಗಿ ಹೋಗಿ ಕಟ್ಟಿಹಾಕಿಕೊಂಡು ಬಿಡಲಿ.ಅವರು ಗೃಹ ಸಚಿವರಾದಗ ಪೊಲೀಸ್ ರಿಗೆ ಕೇಸರಿ ಬಟ್ಟೆ ಹಾಕಿ ಅಧಿಕಾರಿಗಳನ್ನ ನಿಲ್ಲಿಸಿದ್ದರು.ಆ ಕೆಲಸ ನಾವು ಮಾಡಲು ಹೋಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ದೋಖಾ ಮಾಡೋರ ವಿರುದ್ಧ ಪಾಲಿಕೆ ನೋಟೀಸ್ ಸಮರ