Publish Date: Mon, 01 Jul 2019 (15:08 IST)
Updated Date: Mon, 01 Jul 2019 (15:09 IST)
ರಾಜ್ಯದಲ್ಲಿ ಸರಕಾರ ರಚನೆ ಮಾಡುವ ಅವಕಾಶ ಸಿಕ್ಕರೆ ಅದಕ್ಕೆ ಬಿಜೆಪಿ ಸಿದ್ಧವಿದೆ. ನಾವೇನೂ ಸನ್ಯಾಸಿಗಳಲ್ಲ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಲು ನಾವೇನೂ ಪ್ರಯತ್ನ ನಡೆಸಿಲ್ಲ. ಆ ಕುರಿತು ತಾವು ಎಂದಿಗೂ ಮಾತನಾಡಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ ಎನ್ನುವ ಮಾಹಿತಿ ಇದೆ. ಈ ಅತೃಪ್ತ ಶಾಸಕರು ತೆಗೆದುಕೊಳ್ಳುವ ನಿಲುವಿನ ಮೇಲೆ ಮುಂದಿನ ರಾಜಕೀಯ ಭವಿಷ್ಯ ನಿಂತಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅತೃಪ್ತ ಶಾಸಕರು ಅವರಾಗಿಯೇ ಮುಂದಾಗಿ ರಾಜೀನಾಮೆ ಕೊಟ್ಟರೆ ನೋಡೋಣ. ಮತ್ತೆ ರಾಜ್ಯದಲ್ಲಿ ಚುನಾವಣೆ ಮಾಡೋದಕ್ಕೆ ಬಿಡುವುದಿಲ್ಲ ಎಂದ್ರು.
ಶಾಸಕ ಆನಂದ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೆ ಇಂಥ ಸನ್ನಿವೇಶದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ ಕಾದು ನೋಡಿ ಎಂದಷ್ಟೇ ಹೇಳಿದ್ರು.