Publish Date: Sun, 30 Jun 2019 (16:47 IST)
Updated Date: Sun, 30 Jun 2019 (16:48 IST)
ರಾಜ್ಯಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ಜೆಡಿಸ್ ಪಕ್ಷವನ್ನು ಬಲಪಡಿಸಲು ನಿರ್ಧಾರ ಮಾಡಲಾಗಿದೆ.
ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಆಗಸ್ಟ್ 20 ರಿಂದ ರಾಜ್ಯಾದ್ಯಂತ ಪಾದಯಾತ್ರೆ ಮಾಡಲು ಸಿದ್ಧತೆ ನಡೆದಿದೆ.
ಇದು ಪಕ್ಷವನ್ನು ಬಲಪಡಿಸುವ ಏಕೈಕ ಉದ್ದೇಶದಿಂದ ನಡೆಸಲಾಗುತ್ತಿದೆಯೇ ಹೊರತು, ಮೈತ್ರಿ ಸರಕಾರಕ್ಕೆ ಧಕ್ಕೆ ಮಾಡುವ ಇಲ್ಲವೇ, ಕಾಂಗ್ರೆಸ್ ನಾಯಕರಲ್ಲಿ ಅಧೈರ್ಯ ಉಂಟು ಮಾಡಲು ಮಾಡ್ತಿರೋದಲ್ಲ ಅಂತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಇನ್ನೆಂದೂ ರಾಜಕೀಯದಲ್ಲ ಸ್ಪರ್ಧೆ ಮಾಡೋದಿಲ್ಲ ಎಂದ ಅವರು, ಪಾದಯಾತ್ರೆಯ ಹಾಗೂ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಖುದ್ದಾಗಿ ಮುಂದೆ ನಿಂತು ನೋಡಿಕೊಳ್ಳುವುದಾಗಿ ಹೇಳಿದ್ದಾರೆ.