Publish Date: Sat, 29 Jun 2019 (18:06 IST)
Updated Date: Sat, 29 Jun 2019 (18:08 IST)
ರಾಜ್ಯದಲ್ಲೂ ಅತೀ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಬರುತ್ತದೆ. ಕೇಂದ್ರ ಮತ್ತು ರಾಜ್ಯಗಳೆರರಡರಲ್ಲೂ ಬಿಜೆಪಿ ಸರ್ಕಾರವೇ ಇರಬೇಕು. ಅದು ಇಷ್ಟರಲ್ಲೇ ಈಡೇರುತ್ತದೆ. ಹೀಗಂತ ಕೇಂದ್ರ ಸಚಿವ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಇರಬಹುದು. ಆದರೆ ರಾಜ್ಯದ ಯಾವುದೇ ಆಗು ಹೋಗುಗಳಿಗೆ ನೀವೇ ಜವಾಬ್ದಾರರು ಎಂದು ಕರ್ನಾಟಕದ ಜನರು ನಮಗೆ ಸಂದೇಶ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಸಹ ನನಗೆ ಅನಂತಕುಮಾರ್ ಅವರು ದೆಹಲಿಯಲ್ಲಿ ನಿರ್ವಹಿಸುತ್ತಿದ್ದ ಜವಾಬ್ದಾರಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.
ಹಾಗಾಗಿಯೇ ನಾವು ರಾಜ್ಯದ ಎಲ್ಲ ಸಂಸದರು ಒಂದಾಗಿದ್ದೇವೆ. ರಾಜ್ಯದ ಜನ ಶಹಬ್ಬಾಸ್ ಎನ್ನುವಂತೆ ಕೆಲಸ ಮಾಡುತ್ತೇವೆ. ಹೀಗಂತ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ನಾನು ವಾರದಲ್ಲಿ ಐದು ದಿನ ದೆಹಲಿಯಲ್ಲಿ ಇರಬೇಕಾಗಿದೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ಸ್ವಲ್ಪ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಾಗಾಗಿಯೇ ವಾರದಲ್ಲಿ ಎರಡು ದಿನವಾದರೂ ನನ್ನ ಕ್ಷೇತ್ರಕ್ಕೆ ಹಾಗೂ ಕಾರ್ಯಕರ್ತರಿಗೆಮೀಸಲಿಡುತ್ತೇನೆ ಅಂತ ಹೇಳಿದ್ದಾರೆ.