Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲೂ ಜನ ನಾಮ ಹಾಕ್ತಾರೆ

ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲೂ ಜನ ನಾಮ ಹಾಕ್ತಾರೆ
ಬೆಂಗಳೂರು , ಶನಿವಾರ, 29 ಜೂನ್ 2019 (17:29 IST)
ಮೈತ್ರಿ ಸರಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಟೀಕೆಗಳು ಕೇಳಿಬರಲಾರಂಭಿಸಿವೆ. ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿಯೂ ಜನರು ನಾಮ ಹಾಕ್ತಾರೆ. ಹೀಗಂತ ಮಾಜಿ ಡಿಸಿಎಂ ಹೇಳಿದ್ದಾರೆ.

ಮೈತ್ರಿ‌ ಪಕ್ಷಗಳ ನಾಯಕರ ವಿರುದ್ಧ ಬಿಜೆಪಿ ಶಾಸಕ, ಮಾಜಿ ಡಿಸಿಎಂ ಆರ್. ಅಶೋಕ್ ಟೀಕೆ ಮಾಡಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ನಾಯಕರು ದೇವಸ್ಥಾನಗಳನ್ನು ಸುತ್ತಿದ್ರು. ಹೆಚ್.ಡಿ.ರೇವಣ್ಣ ನಿಂಬೆಹಣ್ಣು ಹಿಡಿದು ಓಡಾಡ್ತಿದ್ರು. ಹಾಸನದಲ್ಲಿ ರೇವಣ್ಣ ಅವರ ತೆಂಗಿನಕಾಯಿ ಒಡೆಯಲಿಲ್ಲ. ಜೆಡಿಎಸ್ ಗೆ ಕೊನೆಗೆ ದೇವರೂ ಕೈ ಬಿಟ್ಟ. ಜೆಡಿಎಸ್ ನಲ್ಲಿ‌ ಒಬ್ಬರೇ ಸಂಸದ ಗೆದ್ದಿರೋದು. ಹಾಗಾಗಿ ಕುಮಾರಸ್ವಾಮಿ ಈಗ ಒಬ್ಬಂಟಿ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಗೂ ನಾಮ ಹಾಕಿದಾರೆ. ಕಾಂಗ್ರೆಸ್ ನಲ್ಲೂ ಒಬ್ಬರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಗೂ ಒಂದು ನಾಮ ಹಾಕಿದಾರೆ ಜನರು. ಮುಂದಿನ ಸಲವೂ ಸಿದ್ದರಾಮಯ್ಯ ಗೆ ಜನ ನಾಮ ಹಾಕ್ತಾರೆ ಎಂದು ವ್ಯಂಗ್ಯವಾಡಿದ್ರು.
ಸೋಲಿಗೆ ಮೈತ್ರಿಯೇ ಕಾರಣ ಅಂತ ದೇವೇಗೌಡ್ರು ಹೇಳಿದ್ರು.

ಇಷ್ಟೆಲ್ಲ ಆದರೂ ಜೆಡಿಎಸ್ -  ಕಾಂಗ್ರೆಸ್ ನವರು ಮೈತ್ರಿ ಮುಂದುವರೆಸಿರೋದು ಅಧಿಕಾರಕ್ಕಾಗಿ‌ ಮಾತ್ರ. ಇವರಿಬ್ಬರೂ ಅಧಿಕಾರಕ್ಕಾಗಿ ಮೈತ್ರಿ ಆಗಿದಾರೆ, ರಾಜ್ಯದ ಅಭಿವೃದ್ಧಿಗಲ್ಲ ಎಂದರು.

ಸಿದ್ದರಾಮಯ್ಯ ಅದ್ಯಾಕೋ ನಾಮ ಕಂಡ್ರೆ ಸಿಟ್ಟಾಗುತ್ತಾರೆ‌. ಅವರು ಸಿದ್ದರಾಮಯ್ಯಂಗೆ ನಾಮ ಹಾಕಬೇಕಿತ್ತು. ಈಗ ಒಬ್ಬ ಸಂಸದನನ್ನು ಮಾತ್ರ ಗೆಲ್ಲಿಸಿ ಸಿದ್ದರಾಮಯ್ಯಗೆ ಒಂಟಿ ನಾಮ ಹಾಕಿದ್ದಾರೆ. ಜೆಡಿಎಸ್ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದರೂ ಕೇಳದೆ ಅವರು ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿಯಲ್ಲಿ ಬಿರುಕು?: ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ತೊಲಗಲಿ ಎಂದ ಮಾಜಿ ಸಿಎಂ