ವಿಜಯಪುರ: ಜಿಲ್ಲೆಯ ಹೊವಾಡ ಕ್ಷೇತ್ರದ 15 ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ಬಂದಿದ್ದು ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಏನು ಹೇಳಿದ್ದಾರೆ ಇಲ್ಲಿ ನೋಡಿ.
ಇತ್ತೀಚೆಗೆ ಒಂದೋ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಬಡ ರೈತರಿಗೆ ಈಗ ವಕ್ಫ್ ಬೋರ್ಡ್ ಅವರ ಆಸ್ತಿ ತಮ್ಮದೆಂದು ನೋಟಿಸ್ ನೀಡಿರುವುದು ಅವರನ್ನು ಧೃತಿಗೆಡಿಸಿದೆ. ಇಷ್ಟು ದಿನ ಉಳುಮೆ ಮಾಡಿದ್ದ ಜಮೀನು ಏಕಾಏಕಿ ವಕ್ಪ್ ಬೋರ್ಡ್ ಗೆ ಸೇರಬೇಕು ಎಂದಾಗ ಸಹಜವಾಗಿಯೇ ಆತಂಕವಾಗುತ್ತದೆ.
ಸಚಿವ ಎಂಬಿ ಪಾಟೀಲ್ ಅವರ ಹೊನವಾಡ ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಹಲವು ವರ್ಷಗಳಿಂದ ಇಲ್ಲಿಯೇ ಉಳುಮೆ ಮಾಡುತ್ತಿದ್ದ 15 ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಲಾಗಿದೆ. ಇದರಿಂದ ಅವರು ದಿಕ್ಕೇ ತೋಚದಂತಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಿಮ್ಮ ಆಸ್ತಿ ವಕ್ಫ್ ಆಸ್ತಿಯಾಗಿದ್ದು ಪಹಣಿ ಪತ್ರದಲ್ಲಿ ಕಾಲಂ ನಂಬರ್ 11 ಮತ್ತು 9 ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಹೆದರುವ ಅಗತ್ಯವಿಲ್ಲ, ನಿಮ್ಮ ಬಳಿ ಇರುವ ದಾಖಲೆಗಳನ್ನು ನೀಡಿದರೆ ಸಾಕು ಎಂದಿದ್ದಾರೆ.