Select Your Language

Notifications

webdunia
webdunia
webdunia
webdunia

ಕಾರಿನ ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕ, ಮುಂದೇನಾಯ್ತು ಭಯಾನಕ ವಿಡಿಯೋ ನೋಡಿ

Sunroof car accident

Krishnaveni K

ಬೆಂಗಳೂರು , ಮಂಗಳವಾರ, 9 ಸೆಪ್ಟಂಬರ್ 2025 (11:48 IST)
ಬೆಂಗಳೂರು: ಕೆಲವರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಕಾರಿನ ಸನ್ ರೂಫ್ ನಲ್ಲಿ ತಲೆ ತೂರಿಸಿ ಹೊರಗೆ ನೋಡುತ್ತಾ ಹೋಗುವ ಖಯಾಲಿಯಿರುತ್ತದೆ. ಆದರೆ ಅದೇ ರೀತಿ ಸ್ಟಂಟ್ ಮಾಡಲು ಹೋಗಿ ಇಲ್ಲೊಬ್ಬ ಬಾಲಕನ ಕತೆ ಏನಾಗಿದೆ ಈ ವಿಡಿಯೋ ನೋಡಿ.

ಬೆಂಗಳೂರಿನಲ್ಲಿ ಇಂತಹದ್ದೊಂದು ಭಯಾನಕ ಘಟನೆ ನಡೆದಿದೆ. ಬಾಲಕನೊಬ್ಬ ಚಲಿಸುತ್ತಿದ್ದ ಕಾರಿನ ಸನ್ ರೂಫ್ ನಲ್ಲಿ ತಲೆ ಹೊರಗೆ ಹಾಕಿಕೊಂಡು ಹೋಗುತ್ತಿದ್ದ. ಒಂದು ಕಡೆ ಕಬ್ಬಿಣ ಕಮಾನು ಒಂದಿತ್ತು. ಇದಕ್ಕೆ ಬಾಲಕನ ತಲೆ ಹೊಡೆದಿದೆ.

ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು ಜೀವನ್ಮರಣದ ನಡುವೆ ಹೋರಾಡುವ ಪರಿಸ್ಥಿತಿಯಾಗಿದೆ. ಇದು ಈ ರೀತಿ ಸನ್ ರೂಫ್ ಕಾರಿನಲ್ಲಿ ಸ್ಟಂಟ್ ಮಾಡುವವರಿಗೆ ಒಂದು ಪಾಠವಾಗಬೇಕಾದ ಘಟನೆಯಾಗಿದೆ.

ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಸಂಚಾರಿ ಪೊಲೀಸರೂ ಅಲರ್ಟ್ ಆಗಿದ್ದಾರೆ. ಇದು ಸಂಚಾರೀ ನಿಯಮಗಳ ಉಲ್ಲಂಘನೆಯಾಗಿದ್ದು, ಮಕ್ಕಳು ಸೀಟ್ ಬೆಲ್ಟ್ ಧರಿಸಿ ಕಡ್ಡಾಯವಾಗಿ ಸೀಟ್ ನಲ್ಲಿ ಕೂರಬೇಕು. ಇದನ್ನು ತಪ್ಪಿದ್ದಕ್ಕೆ ದಂಡದ ಬರೆಯನ್ನೂ ಹಾಕಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲಕ್ಕೆ ಮುನ್ನ ಡಾ ಸಿಎನ್ ಮಂಜುನಾಥ್ ಅವರ ಈ ಎಚ್ಚರಿಕೆ ಗಮನಿಸಿ