Select Your Language

Notifications

webdunia
webdunia
webdunia
webdunia

10 ಕೋಟಿಗೆ ‘ವಿಕ್ರಾಂತ್‌ ರೋಣ’ ಸೇಲ್‌

10 ಕೋಟಿಗೆ ‘ವಿಕ್ರಾಂತ್‌ ರೋಣ’ ಸೇಲ್‌
ನಟ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ವಿದೇಶಿ ಮಾರುಕಟ್ಟೆಯಲ್ಲಿ ಆಗಲೇ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಓವರ್‌ ಸೀಸ್‌ನಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು 10 ಕೋಟಿಗೆ ಮಾರಾಟಗೊಂಡಿವೆ. ಆ ಮೂಲಕ ಕನ್ನಡ ಚಿತ್ರವೊಂದು ಬಿಡುಗಡೆ ಆಗುವ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಉತ್ಸಾಹದ ಮಾತು. ವಿದೇಶದಲ್ಲಿ ಚಿತ್ರದ ಹಕ್ಕುಗಳನ್ನು ಒನ್‌ ಟ್ವೆಂಟಿ 8 ಮೀಡಿಯಾ ಹೆಸರಿನ ಸಂಸ್ಥೆ ತನ್ನದಾಗಿಸಿಕೊಂಡಿದೆ..3ಡಿ ತಂತ್ರಜ್ಞಾನದಲ್ಲಿ ಜುಲೈ 28ರಂದು ದೇಶ- ವಿದೇಶಗಳಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್‌ ಮಾಡುತ್ತಿರೋದ್ರಿಂದ ನಿರ್ಮಾಪಕ ಜಾಕ್‌ ಮಂಜು ಸಂಭ್ರಮದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಮೇಲೆ ಚಿರತೆ ದಾಳಿ