Select Your Language

Notifications

webdunia
webdunia
webdunia
webdunia

ಅಜಯ್ ದೇವಗನ್-ಕಿಚ್ಚ ಸುದೀಪ್ ವಿವಾದದ ಬಗ್ಗೆ ಸೋನು ನಿಗಂ ಮಹತ್ವದ ಹೇಳಿಕೆ

ಅಜಯ್ ದೇವಗನ್-ಕಿಚ್ಚ ಸುದೀಪ್ ವಿವಾದದ ಬಗ್ಗೆ ಸೋನು ನಿಗಂ ಮಹತ್ವದ ಹೇಳಿಕೆ
ಮುಂಬೈ , ಮಂಗಳವಾರ, 3 ಮೇ 2022 (20:15 IST)
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ಎಂದು ಕಿಚ್ಚ ಸುದೀಪ್ ಜೊತೆ ಟ್ವೀಟ್ ವಾರ್ ನಡೆಸಿದ್ದರ ಬಗ್ಗೆ ಖ್ಯಾತ ಗಾಯಕ ಸೋನು ನಿಗಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಜಯ್ ದೇವಗನ್ ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದಿದ್ದರು. ಈ ಬಗ್ಗೆ ಸೋನು ನಿಗಂಗೆ ಸಂದರ್ಶನವೊಂದರಲ್ಲಿ ಪ್ರಶ್ನಿಸಲಾಯಿತು.

ಅದಕ್ಕೆ ಪ್ರತಿಕ್ರಿಯಿಸಿರುವ ಸೋನು ‘ಹಿಂದಿ ಅತೀ ಹೆಚ್ಚು ಜನರು ಮಾತನಾಡುವ ಭಾಷೆ ಇರಬಹುದು. ಆದರೆ ನಮ್ಮ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ. ತಮಿಳು ಮತ್ತು ಸಂಸ್ಕೃತ ನಡುವೆ ಯಾವುದು ಅತ್ಯಂತ ಹಳೆಯ ಭಾಷೆ ಎಂದು ವಾದಗಳಿವೆ. ಆದರೆ ಅದೇನೇ ಇದ್ದರೂ ಭಾಷೆಯ ಹೆಸರಿನಲ್ಲಿ ನಮ್ಮ ನಡುವೆ ವಿಭಜಿಸುವ ಕೆಲಸವಾಗಬಾರದು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂನಲ್ಲಿ ದಾಖಲೆ ಮಾಡಿದ ನಟಿ ಮೇಘಾ ಶೆಟ್ಟಿ