Publish Date: Fri, 29 Apr 2022 (09:50 IST)
Updated Date: Fri, 29 Apr 2022 (09:53 IST)
ಮುಂಬೈ: ಕಿಚ್ಚ ಸುದೀಪ್ ಜೊತೆ ಹಿಂದಿ ವಿವಾದದ ನಡುವೆ ಇಂದು ಅಜಯ್ ದೇವಗನ್ ಅಭಿನಯದ ರನ್ ವೇ 34 ಸಿನಿಮಾ ಬಿಡುಗಡೆಯಾಗಿದೆ.
ಈ ಸಿನಿಮಾ ವೀಕ್ಷಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತನ್ನ ಗೆಳೆಯ ಅಜಯ್ ಗೆ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಅಜಯ್ ರಂತೇ ಅಕ್ಷಯ್ ಕೂಡಾ ಗುಟ್ಕಾ ಜಾಹೀರಾತಿನಲ್ಲಿ ನಟಿಸಲು ಹೋಗಿ ಟ್ರೋಲ್ ಆಗಿದ್ದರು. ಈಗ ಅಕ್ಷಯ್, ಅಜಯ್ ಸಿನಿಮಾಗೆ ವಿಶ್ ಮಾಡಿದ್ದಕ್ಕೆ ನೆಟ್ಟಿಗರು ಇದೇ ವಿಚಾರವನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.
ಇಬ್ಬರದ್ದೂ ಗುಟ್ಕಾ ಗ್ಯಾಂಗ್ ಎಂದು ಹಲವರು ಜರೆದಿದ್ದಾರೆ. ಮತ್ತೆ ಕೆಲವರು ಹಿಂದಿ ವಿವಾದದ ವಿಚಾರ ಕೆದಕಿ ಅಕ್ಷಯ್-ಅಜಯ್ ಒಂದೇ ಗ್ಯಾಂಗ್ ಎಂದು ಲೇವಡಿ ಮಾಡಿದ್ದಾರೆ.