Select Your Language

Notifications

webdunia
webdunia
webdunia
webdunia

ಇಂದು ಸ್ಯಾಂಡಲ್ ವುಡ್ ನಲ್ಲಿ ಪ್ರಮುಖವಾಗಿ ಎರಡು ಚಿತ್ರಗಳು ತೆರೆಗೆ

ಇಂದು ಸ್ಯಾಂಡಲ್ ವುಡ್ ನಲ್ಲಿ ಪ್ರಮುಖವಾಗಿ ಎರಡು ಚಿತ್ರಗಳು ತೆರೆಗೆ
ಬೆಂಗಳೂರು , ಶುಕ್ರವಾರ, 29 ಏಪ್ರಿಲ್ 2022 (09:10 IST)
ಬೆಂಗಳೂರು: ಶುಕ್ರವಾರವಾಗಿರುವ ಕಾರಣ ಗಾಂಧಿನಗರದಲ್ಲಿ ಇಂದು ಮತ್ತಷ್ಟು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಇಂದು ಪ್ರಮುಖವಾಗಿ ಎರಡು ಸಿನಿಮಾಗಳು ತೆರೆಗೆ ಬರುತ್ತಿವೆ. ಒಂದು ದಿಗಂತ್ ಮಂಚಾಲೆ-ಐಂದ್ರಿತಾ ಪ್ರಮುಖ ಪಾತ್ರದಲ್ಲಿರುವ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ. ಇನ್ನೊಂದು ಅಜೇಯ್ ರಾವ್ ಅಭಿನಯದ ಶೋಕಿವಾಲ.

ಶೋಕಿವಾಲ ಸಿನಿಮಾದಲ್ಲಿ ಅಜೇಯ್ ಜೊತೆಗೆ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಮಲೆನಾಡ ಹಿನ್ನಲೆಯ ಕತೆ ಹೊಂದಿದ್ದು, 8 ವರ್ಷಗಳ ಬಳಿಕ ರಿಯಲ್ ಲೈಫ್ ಜೋಡಿ ದಿಗಂತ್-ಐಂದ್ರಿತಾ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸಕ್ಸಸ್ ಬಳಿಕ ಪುಷ್ಪ 2 ನಿರ್ದೇಶಕರು ಅಲರ್ಟ್!