Publish Date: Thu, 28 Apr 2022 (08:30 IST)
Updated Date: Thu, 28 Apr 2022 (08:45 IST)
ಮೈಸೂರು: ನಟಿ ತಾರಾ ಅನುರಾಧಾಗೆ ಮಾತೃವಿಯೋಗವಾಗಿದೆ. 76 ವರ್ಷ ವಯಸ್ಸಿನ ಪುಷ್ಪಾ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಗಳು ತಾರಾ ಜೊತೆ ಶೂಟಿಂಗ್ ಗೆ ಬಂದಿದ್ದ ಪುಷ್ಪಾ ತೀವ್ರ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಮಗೆ ಸದಾ ಬೆಂಬಲವಾಗಿರುತ್ತಿದ್ದ ತಾಯಿಯ ನಿಧನ ತಾರಾ ಅವರಿಗೆ ತೀವ್ರ ದುಃಖ ತಂದಿದೆ.