Select Your Language

Notifications

webdunia
webdunia
webdunia
webdunia

ಪೊಲೀಸರ ಮೇಲೆ ಚಿರತೆ ದಾಳಿ

Leopard attack on police
bangalore , ಮಂಗಳವಾರ, 10 ಮೇ 2022 (20:09 IST)
ಹರಿಯಾಣದ ಪಾಣಿಪತ್ ಜಿಲ್ಲೆಯ ಬಾಪೋಲಿ ಬ್ಲಾಕ್‌ನ ಬೆಹ್ರಾಂಪುರ ಗ್ರಾಮಕ್ಕೆ ಚಿರತೆಯೊಂದು ನುಗ್ಗಿ, ಪೊಲೀಸರು ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಕೆಲವು ಗ್ರಾಮಸ್ಥರು ಗ್ರಾಮದಲ್ಲಿ ಚಿರತೆ ಇರುವುದನ್ನು ಪತ್ತೆ ಮಾಡಿದ ನಂತರ ರಕ್ಷಣಾ ತಂಡವು ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಿರತೆಯನ್ನು ಹಿಡಿಯುವ ಪ್ರಯತ್ನದಲ್ಲಿದ್ದಾದ ತಂಡದ ನೇತೃತ್ವ ವಹಿಸಿದ್ದ ಸ್ಟೇಷನ್ ಹೌಸ್ ಆಫೀಸರ್ & ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು  ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಚಿರತೆಯನ್ನು ಯಶಸ್ವಿಯಾಗಿ ಶಾಂತಗೊಳಿಸಿ ಸೆರೆ ಹಿಡಿಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಫೋಟೋ, ಹಲವು ಪ್ರಶ್ನೆ..!