Select Your Language

Notifications

webdunia
webdunia
webdunia
webdunia

ಸಿಕೆಆರ್‌ 45 ಅಂಬಾಸಿಡರ್ ಕಾರಿನ ಜತೆಗಿನ ಹಿರಿಯ ನಾಯಕರ ಒಡನಾಟ ಬಿಚ್ಚಿಟ್ಟ ವಿಜಯೇಂದ್ರ

ಸಿಕೆಆರ್ 45 ಅಂಬಾಸಿಡರ್ ಕಾರು

Sampriya

ಬೆಂಗಳೂರು , ಗುರುವಾರ, 4 ಸೆಪ್ಟಂಬರ್ 2025 (19:43 IST)
ಬೆಂಗಳೂರು: ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದೆ. ತಂದೆಯವರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಪಕ್ಷದ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರದಲ್ಲಿ ಒಂದು ಅಂಬಾಸಿಡರ್ ಕಾರು ಬಳಸುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, 1988ರಲ್ಲಿ ಖರೀದಿಸಿದ ಅಂಬಾಸಿಡರ್ ಕಾರು ಅದಾಗಿದೆ. ಆ ಕಾರಿನ ಸಂಖ್ಯೆ ಸಿಕೆಆರ್ 45 ಆಗಿದ್ದು, ಇವತ್ತೂ ಅದು ನಮ್ಮ ಮನೆಯಲ್ಲಿದೆ ಎಂದು ತಿಳಿಸಿದರು. 

ನಿನ್ನೆ ಶಿಕಾರಿಪುರದಲ್ಲಿ ಆ ಕಾರನ್ನು ಬಳಸಿದೆ. ರಾಜ್ಯದಲ್ಲಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ, ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಸಿಕ್ಕಿದ್ದರೆ, ತಂದೆಯವರು ಬಳಸುತ್ತಿದ್ದ ಈ ಕಾರು ಪ್ರಮುಖ ಪಾತ್ರ ವಹಿಸಿದೆ. ಯಡಿಯೂರಪ್ಪಜೀ, ಅನಂತಕುಮಾರ್ ಜೀ, ಅನೇಕ ಹಿರಿಯರು ಅದೇ ಅಂಬಾಸಿಡರ್ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಹಳ್ಳಿ ಹಳ್ಳಿಗೆ ತೆರಳಿದ್ದರು. ರಾಯಚೂರು, ಗುಲ್ಬರ್ಗ, ಬಳ್ಳಾರಿ, ಯಾದಗಿರಿ ಸೇರಿ ಯಾವ ಜಿಲ್ಲೆಯನ್ನೂ ಬಿಟ್ಟಿಲ್ಲ ಎಂದು ನೆನಪಿಸಿದರು.

ಅದೇ ಅಂಬಾಸಿಡರ್ ಕಾರಿನಲ್ಲಿ ಲಕ್ಷಾಂತರ ಕಿಮೀ ಪ್ರವಾಸ ಮಾಡಿದ್ದಾರೆ. ಸಿಕೆಆರ್ 45 ಕಾರಿನ ಜೊತೆ ಬಹಳಷ್ಟು ಹಿರಿಯ ನಾಯಕರ ಒಡನಾಟ ಇದೆ. ಒಂದು ಆತ್ಮೀಯತೆ ಇದೆ. ನಿನ್ನೆ ನಾನು ವಿಡಿಯೋ ಹಂಚಿಕೊಂಡಾಗ ಸಾಕಷ್ಟು ಹಿರಿಯ ಕಾರ್ಯಕರ್ತರು ನಾನು ನೆನಪು ಮಾಡಿಕೊಂಡಿದ್ದಕ್ಕೆ ನನಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ನುಡಿದರು.

ಆ ಕಾರಿನ ಜೊತೆ ಭಾವನಾತ್ಮಕ ಸಂಬಂಧವಿದೆ. ಅದೊಂದು ರೀತಿ ಕಮಲ ರಥ ಎಂದರೆ ತಪ್ಪಾಗಲಾರದು ಎಂದು ವಿಶ್ಲೇಷಿಸಿದರು. ಹಿಂದೆ ಯಡಿಯೂರಪ್ಪನವರು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಹೊರಟಿದ್ದರು. ನಾಯಕ್ ಎಂಬವರು ಚಾಲಕರಾಗಿದ್ದರು. 

ತರೀಕೆರೆಯಲ್ಲಿ ಬೆಳಿಗ್ಗೆ ಇದೇ ಕಾರು ಪಲ್ಟಿಯಾಗಿ ಅಪಘಾತ ಆಗಿತ್ತು. ಆದರೆ, ಯಾರಿಗೂ ಸಣ್ಣ ಗಾಯವೂ ಆಗಿರಲಿಲ್ಲ ಎಂದು ನೆನಪು ಮಾಡಿದರು. ಯಡಿಯೂರಪ್ಪನವರು ದಿನಪತ್ರಿಕೆ ಓದುತ್ತಿದ್ದರು. ಯಾರಿಗೂ ಸಣ್ಣ ಗಾಯವೂ ಆಗಿರಲಿಲ್ಲ ಎಂದು ವಿವರಿಸಿದರು.

ಆ ಕಾರು ಅಷ್ಟೇ ಗಟ್ಟಿಮುಟ್ಟಾಗಿತ್ತು ಎಂದ ಅವರು, ಸ್ನೇಹಿತರ ಜೊತೆ ಪ್ರವಾಸ ಹೋಗಬೇಕಿತ್ತು. ಆ ಕಾಲದಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕಾರಿಗಾಗಿ ತಂದೆಯವರ ಜೊತೆ ಗಲಾಟೆ ಮಾಡಿದ್ದೆ; ಆಗ ಸಾಹೇಬರು ಅದು ಪಕ್ಷದ ಕಾರು; ಹಾಗೆಲ್ಲ ಬಳಸಲು ಬರುವುದಿಲ್ಲ ಎಂದು ತಿಳಿಸಿದ್ದರು. ಶಿಕಾರಿಪುರದಲ್ಲಿ ಕೆಲವು ಬಡವರು ಆಸ್ಪತ್ರೆಗೆ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆ ಕಾರನ್ನು ಕಳಿಸಿಕೊಡುತ್ತಿದ್ದರು. ಅದನ್ನು ತಂದೆಯವರಿಗೆ ನೆನಪಿಸಿದ್ದೆ. ಮಕ್ಕಳು ಕೇಳಿದರೆ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ನನಗೆರಡು ತಟ್ಟಿದ್ದರು ಎಂದು ನಗುತ್ತ ಮನದಾಳದ ನೆನಪುಗಳನ್ನು ಮಾಧ್ಯಮಗಳ ಮುಂದಿಟ್ಟರು

Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಗೋ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ಅನುಚಿತ ವರ್ತನೆ, ಮುಂದೇನಾಯ್ತು ಗೊತ್ತಾ