Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

Vijayendra lashed out against the government
bangalore , ಬುಧವಾರ, 24 ಮೇ 2023 (20:53 IST)
ಕಾಂಗ್ರೆಸ್‌ನವರಿಗೆ ಜ್ಞಾನೋದಯ ಆಗಿದೆ.ಅದಕ್ಕೆ ನಾನು ಧನ್ಯವಾದ ಹೇಳ್ತೀನಿ.ನಿನ್ನೆ ಡಿಸಿಎಂ ಸಾಹೇಬ್ರು ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದಾರೆ.ಕೇಸರೀಕರಣದ ವಿರುದ್ಧವೂ ಮಾತಾಡಿದಾರೆ.ರಾಷ್ಟ್ರದ ಧ್ಚಜದಲ್ಲಿ‌ ಕೇಸರಿ ಬಣ್ಣ ಇದೆ, ಸ್ವಾಮೀಜಿ ಗಳ‌ ಉಡುಗೆ ಕೇಸರಿ, ಹನುಮ ಧ್ವಜದ ಬಣ್ಣ ಕೇಸರಿ.ಇಂಥ ಕೇಸರಿ ಬಗ್ಗೆ ಕಾಂಗ್ರೆಸ್ ನವ್ರಿಗೆ ಯಾಕೆ ಸಿಟ್ಟು‌ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.
 
ಇಡೀ ದೇಶದಲ್ಲೇ ಅಧಿಕಾರಕ್ಕೆ ಬಂದಿದೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್‌ನವರು ಇದಾರೆ.ಇಂತಹ ಭ್ರಮೆಯಲ್ಲಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಅವರಿಗೆ ತಮ್ಮ ಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯದ ಸಿಎಂ ಐದು ವರ್ಷ ಇರ್ತಾರೋ ಇಲ್ವೋ ಅಂತನೇ ಗ್ಯಾರಂಟಿ ಇಲ್ಲ.ಗ್ಯಾರಂಟಿ ಸ್ಕೀಂಗಳ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ನಿರಾಸೆ ಕಾದಿದೆಯಾ ಅಂತ ಅನುಮಾನ ಬರ್ತಿದೆ.ದಾರೀಲಿ ಹೋಗೋರ ಬಳಿ ಮತ ಕೇಳಿ ಹಾಕಿಸಿಕೊಂಡಿದ್ದಾರೆ.ಆದ್ರೆ ಗ್ಯಾರಂಟಿ ಬೀದೀಲಿ ಹೋಗೋರಿಗೆ ಕೊಡಲ್ಲ ಅಂತಿದಾರೆ.ಈ ಸರ್ಕಾರ ಡಬಲ್ ಸ್ಟೇರಿಂಗ್ ಸರ್ಕಾರ.ಸಿಎಂಗೊಂದು ಸ್ಟೇರಿಂಗ್, ಡಿಸಿಎಂಗೊಂದು ಸ್ಟೇರಿಂಗ್ ,ಯಾರು ಯಾವ ಕಡೆ ಎಳೀತಾರೋ ಗೊತ್ತಿಲ್ಲ.ಯಾರು ಯಾವ ಕಡೆಗೆ ಸ್ಟೇರಿಂಗ್ ತಿರುಗಿಸ್ತಾರೋ‌..? ಬಸ್ ಯಾವ ಕಡೆ ಹೋಗುತ್ತೋ ಕಾದು ನೋಡಬೇಕು.ಇವರಿಗೆ ಆ ದೇವರೇ ಬುದ್ಧಿ ಕಲಿಸ್ತಾರೆ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್‌ ಮೇಲೆ ಮರದ ರೆಂಬೆ ಬಿದ್ದು ಯುವಕ ಜೀವನ್ಮರಣ ಹೋರಾಟ