ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

Krishnaveni K
ಮಂಗಳವಾರ, 16 ಡಿಸೆಂಬರ್ 2025 (13:56 IST)
ಬೆಂಗಳೂರು: ದರ್ಶನ್ ತೂಗುದೀಪ ಅರೆಸ್ಟ್ ಆದಾಗ ಅವರ ಪುತ್ರ ವಿನೀಶ್ ತೂಗುದೀಪ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿಜಯಲಕ್ಷ್ಮಿ ದರ್ಶನ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದರ ನಡುವೆ ಅವರು ನಾಯಕರಾಗಿರುವ ಡೆವಿಲ್ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಅಧಿಕೃತ ಅಭಿಮಾನಿ ಸಂಘದ ಸೋಷಿಯಲ್ ಮೀಡಿಯಾಗೆ ವಿಜಯಲಕ್ಷ್ಮಿ ದರ್ಶನ ಸಂದರ್ಶನ ನೀಡಿದ್ದಾರೆ. ಸ್ವತಃ ಡೆವಿಲ್ ನಾಯಕಿ ರಚನಾ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಅನೇಕ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ದರ್ಶನ್ ಅರೆಸ್ಟ್ ಆದಾಗ ವಿನೀಶ್ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

‘ಅದು ಕಷ್ಟ ಆಯ್ತು. ಅವನಿಗೆ ಈಗ ಇನ್ನೂ 17 ವರ್ಷ. ಮೊದಲ ಬಾರಿ ಅರೆಸ್ಟ್ ಆದಾಗ 16 ವರ್ಷ. 16 ವರಷದ ಹುಡುಗನಿಗೆ ಏನಂತ ವಿವರಿಸಲಿ? ಮೊದಲು ಅರೆಸ್ಟ್ ಆದಾಗ ಬಾಸ್ಕೆಟ್ ಬಾಲ್ ಕೋಚಿಂಗ್ ನಲ್ಲಿದ್ದ. ಅವನಿಗೆ ಕಾಲ್ ಮಾಡಿ ಏನೂ ಹೇಳದೇ ಮನೆಗೆ ಬಂದು ಬಿಡು ಎಂದಿದ್ದೆ. ಅವನಿಗೆ ಏನು ಅಂತಾನೂ ಗೊತ್ತಿರಲಿಲ್ಲ. ಆದರೆ ಫೋನ್ ನಲ್ಲಿ ನೋಡಿ ಗೊತ್ತಾಗಿ ಅಪ್ಪ ಅರೆಸ್ಟ್ ಆದರಾ ಏನಾಯ್ತು ಎಂದು ಅತ್ತುಕೊಂಡು ಬಂದ. ನನಗೂ ಏನೂ ಹೇಳುವ ಸ್ಟ್ರೆಂಗ್ತ್ ಇರಲಿಲ್ಲ. ಅದಾದ ಮೇಲೂ ಸುಮಾರು ದಿನ ನಾನಾಗಿಯೇ ಏನಕ್ಕೆ ಆಯ್ತು ಅಂತ ಹೇಳಿರಲಿಲ್ಲ. ಆದರೆ ಅವನಿಗೆ ಅವನ ಫ್ರೆಂಡ್ಸ್ ಹೇಳಿ ಗೊತ್ತಾಯ್ತು. ಯಾಕೆಂದರೆ ನಮ್ಮ ಮನೆಯಲ್ಲಿ ನಾವು ಕನ್ನಡ ಚಾನೆಲ್ಸ್ ಹಾಕೋದೇ ಇಲ್ಲ. ನಮ್ಮ ಮನೆಯಲ್ಲಿ ಅದೊಂದು ರೂಲ್. ನಮ್ಮ ಕನ್ನಡ ಚಾನೆಲ್ ಗಳಲ್ಲಿ ನಮ್ಮ ಕಲಾವಿದರು ಎಂದರೆ ಏನೋ ಬರ್ತಾ ಇರುತ್ತೆ. ಅದೆಲ್ಲಾ ಮಗ ನೋಡೋದು ಬೇಡ ಅಂತ.

ಫ್ರೆಂಡ್ಸ್ ಹೇಳೋದನ್ನು ಕೇಳಿ ನನಗೆ ಕೇಳೋನು. ಮಧ್ಯರಾತ್ರಿ ಎಲ್ಲಾ ಎದ್ದು ಕೂತು ಅಳ್ತಿದ್ದ. ನನಗೆ ಈಗಲೂ ನೆನಪಿದೆ. ಮಧ್ಯರಾತ್ರಿ 2 ಗಂಟೆಗೆಲ್ಲಾ ಎದ್ದು ಅಮ್ಮಾ ಐ ಮಿಸ್ ಅಪ್ಪಾ.. ಅಪ್ಪಂಗೆ ಏನೂ ಆಗಲ್ಲಾ ಅಲ್ವಾ ಎಂದು ಅಳುತ್ತಿದ್ದ. ಅವನನ್ನು ಎರಡು ತಿಂಗಳು ಸುಧಾರಿಸಲೂ ಕಷ್ಟ ಆಗಿತ್ತು.

ಆದರೆ ಎರಡನೇ ಬಾರಿ ಅರೆಸ್ಟ್ ಆದಾಗ, ದರ್ಶನ್ ಗೆ ಗೊತ್ತಲ್ಲಾ?  ಹಾಗಾಗಿ ದರ್ಶನ್ ಹೊರಡುವ ಮುಂಚೆ ಅವನ ಜೊತೆ ಹೇಳಿ ಹೋಗಿದ್ದರು. ಹೀಗಾಗಿ ಸ್ವಲ್ಪ ಬೆಟರ್. ಆದರೂ ಆ ಖಾಲಿತನ ಇದೆ. ಕೇಳ್ತಾ ಇರ್ತಾನೆ. ಅಪ್ಪ ಅನ್ನೋದಕ್ಕಿಂತ ಮನೆಯೊಳಗೆ ಅವನು ಫ್ಯಾನ್ ಥರಾ ಆಡ್ತಾನೆ. ಅದಕ್ಕೆ ನಾನು ದರ್ಶನ್ ಗೆ ಯಾವತ್ತೂ ಹೇಳ್ತಿರ್ತೇನೆ ನೀನು ಮೊದಲ ಫ್ಯಾನ್ ನ ಮನೆಯಲ್ಲಿಯೇ ಹುಟ್ಟಿಸಿದ್ದೀಯಾ ಅಂತ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ತಂದೆ ಪ್ರೀತಿಗೆ ಧನ್ಯವಾದಗಳು: ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂದೇಶಕ್ಕೆ ಕುಮಾರಸ್ವಾಮಿ ಭಾವುಕ

ಮುಂದಿನ ಸುದ್ದಿ
Show comments