Publish Date: Mon, 31 Aug 2026 (14:59 IST)
Updated Date: Mon, 31 Aug 2026 (15:04 IST)
ಸಚಿವರೊಬ್ಬರು ಖುದ್ದಾಗಿ ಕಸ ಸಂಗ್ರಹಿಸುವ ವಾಹನದ ಬಳಿ ನಿಂತು, ನಗರದ ನೈರ್ಮಲ್ಯ ಪ್ರಕ್ರಿಯೆಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?
ಸೋಮವಾರ ಬೆಳಗಿನ ಜಾವ 5:30ಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಲ್ಲಸಂದ್ರ ಮತ್ತು ದಾಸರಹಳ್ಳಿ ವ್ಯಾಪ್ತಿಯಲ್ಲಿ ಇಂತಹದೊಂದು ಅಪರೂಪದ ಹಾಗೂ ಜವಾಬ್ದಾರಿಯುತ ಹೆಜ್ಜೆಯನ್ನುಿಡುವ ಮೂಲಕ ಪ್ರತ್ಯಕ್ಷವಾಗಿ ಕಾರ್ಯನಿರ್ವಹಿಸಿದ್ದಾರೆ.
ನಗರದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಮತ್ತು ಅದರಲ್ಲಿರುವ ಸವಾಲುಗಳೇನು ಎಂಬುದನ್ನು ನೇರವಾಗಿ ಅರ್ಥೈಸಿಕೊಳ್ಳಲು ಸಚಿವರು ಸ್ವತಃ ರಸ್ತೆಗಿಳಿದರು. ಕಸದ ಗಿಡ ಹಾಗೂ ಆಟೋ ಟಿಪ್ಪರ್‌ಗಳು ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವಿಧಾನ, ಕಸ ವಿಂಗಡಣೆ (ಹಸಿ ಮತ್ತು ಒಣ ತ್ಯಾಜ್ಯ) ಹಾಗೂ ಪೌರಕಾರ್ಮಿಕರ ಕೆಲಸದ ಸಮಯವನ್ನು ಖುದ್ದಾಗಿ ಪರಿಶೀಲಿಸಿದರು.
ಸ್ಥಳದಲ್ಲಿದ್ದ ಪೌರಕಾರ್ಮಿಕರು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿ, ದಿನನಿತ್ಯ ಎದುರಾಗುವ ತಾಂತ್ರಿಕ ತೊಂದರೆಗಳು ಹಾಗೂ ವ್ಯವಸ್ಥೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಾಮಾನ್ಯವಾಗಿ ಸಚಿವರು ಮತ್ತು ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಸಭೆ ನಡೆಸಿ ನಿರ್ದೇಶನ ನೀಡುವುದನ್ನು ನೋಡಿರುವ ಜನರಿಗೆ, ಸಚಿವರ ಈ ಕಾರ್ಯವೈಖರಿ ಅಚ್ಚರಿ ಮತ್ತು ಮೆಚ್ಚುಗೆಯನ್ನು ಉಂಟುಮಾಡಿದೆ. ರಸ್ತೆಮಟ್ಟದಲ್ಲಿ ನಿಂತು ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಈ ನಾಯಕತ್ವದ ನಡೆ, ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ