Publish Date: Mon, 31 Aug 2026 (09:53 IST)
Updated Date: Mon, 31 Aug 2026 (09:58 IST)
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಅಥವಾ ಮಾಹಿತಿ ಸಲ್ಲಿಕೆ ಹಾಗೂ ಪರಿಶೀಲನೆ ಪೂರ್ಣಗೊಳಿಸಲು ಇಂದೇ ಕೊನೆಯ ದಿನವಾಗಿದೆ. ಈವರೆಗೆ ಅರ್ಜಿ ಸಲ್ಲಿಸದ ಅಥವಾ ಅಗತ್ಯ ದಾಖಲೆಗಳನ್ನು ಒದಗಿಸದ ಫಲಾನುಭವಿಗಳು ತಕ್ಷಣವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಕೆ ಮತ್ತು ದಾಖಲೆ ಸಲ್ಲಿಸಲು ಕೊನೆಯ ಅವಕಾಶ
ಆನ್‌ಲೈನ್ ಅರ್ಜಿ ಸಲ್ಲಿಕೆ: ರಾಜ್ಯ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಮೂಲಕ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಆಫ್‌ಲೈನ್ ಕೇಂದ್ರಗಳು: ಕರ್ನಾಟಕ ಒನ್ , ಗ್ರಾಮ್ ಒನ್ , ಬೆಂಗಳೂರು ಒನ್ ಅಥವಾ ಸ್ಥಳೀಯ ನಾಡಕಚೇರಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅಗತ್ಯವಿರುವ ಮುಖ್ಯ ದಾಖಲೆಗಳು
ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನೆಗೆ ಈ ಕೆಳಗಿನ ದಾಖಲೆಗಳು ಕಡ್ಡಾಯ:
ಆಧಾರ್ ಕಾರ್ಡ್
ಇತ್ತೀಚಿನ ವಿದ್ಯುತ್ ಬಿಲ್ (Account ID / Consumer Number ನಮೂದಾಗಿರಬೇಕು)
ಮೊಬೈಲ್ ಸಂಖ್ಯೆ (ಆಧಾರ್‌ಗೆ ಲಿಂಕ್ ಆಗಿರುವುದು ಸೂಕ್ತ)
ಬಾಡಿಗೆ ಒಪ್ಪಂದ ಪತ್ರ (ಬಾಡಿಗೆದಾರರಾಗಿದ್ದರೆ ಮಾತ್ರ)
ಪ್ರಮುಖ ಸೂಚನೆಗಳು
ಗೊಂದಲಗಳಿಗೆ ಕಿವಿಗೊಡಬೇಡಿ: ಯೋಜನೆಯ ಸೌಲಭ್ಯವನ್ನು ಮುಂದುವರಿಸಲು ಹಾಗೂ ಯಾವುದೇ ಬಿಲ್ ತೊಂದರೆಗಳನ್ನು ತಪ್ಪಿಸಲು ಇಂದೇ ಪ್ರಕ್ರಿಯೆ ಪೂರ್ಣಗೊಳಿಸಿ.
ಸಹಾಯವಾಣಿ: ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ವಿದ್ಯುತ್ ಸರಬರಾಜು ಕಂಪನಿಗಳ (BESCOM, HESCOM, MESCOM, CESC, GESCOM) ಗ್ರಾಹಕ ಸೇವಾ ಕೇಂದ್ರ ಅಥವಾ 1912 ಸಹಾಐವಾಣಿಯನ್ನು ಸಂಪರ್ಕಿಸಬಹುದು.
ಇನ್ನೂ ಅರ್ಜಿ ಸಲ್ಲಿಸದ ಸಾರ್ವಜನಿಕರು ತಕ್ಷಣವೇ ಸೇವಾ ಸಿಂಧು ಪೋರ್ಟಲ್ ಅಥವಾ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ