Publish Date: Mon, 31 Aug 2026 (09:46 IST)
Updated Date: Mon, 31 Aug 2026 (09:49 IST)
ಬೆಂಗಳೂರು: ನಿನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಮುಸ್ಲಿಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠ ಧರ್ಮ, ನನಗೂ ಹಜ್ ಯಾತ್ರೆಗೆ ಹೋಗಲು ಆಸೆಯಿದೆ ಎಂದು ಹೇಳಿದ್ದರು. ಆದರೆ ಇದೀಗ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ.
ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿವರು ಮುಸ್ಲಿಂ ಧರ್ಮ ಶ್ರೇಷ್ಠ ಧರ್ಮ. ಆದರೆ ಈ ಧರ್ಮದ ಬಗ್‍ಗೆ ತಪ್ಪು ಹರಡಲಾಗಿದೆ. ನನಗೂ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದಿದ್ದರು.
ಅವರ ಹೇಳಿಕೆ ಕೆಲವರ ಟೀಕೆಗೆ ಗುರಿಯಾಗಿತ್ತು. ಈ ಹಿಂದೆ ನಾನು ದೇವಸ್ಥಾನಕ್ಕೆ ಹೋಗಲ್ಲ, ಬಸವ ತತ್ವವೇ ಶ್ರೇಷ್ಠ ಎಂದಿದ್ದ ಬಸವರಾಜ ರಾಯರೆಡ್ಡಿ ಈಗ ಉಲ್ಟಾ ಹೊಡೆದಿದ್ದೇಕೆ ಎಂದು ಟೀಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈಗ ಅವರು ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.
ನಾನು ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ. ಮುಸ್ಲಿಂ ಧರ್ಮದಲ್ಲಿರುವ ಒಳ್ಳೆಯ ವಿಚಾರಗಳನ್ನು ಹೇಳಿದ್ದೇನೆ. ಎಲ್ಲಾ ಧರ್ಮಗಳೂ ಶ್ರೇಷ್ಠ, ಇಸ್ಲಾಂ ಧರ್ಮದಲ್ಲೂ ಶ್ರೇಷ್ಠ ವಿಚಾರವಿದೆ ಎಂದಿದ್ದಾರೆ.
ಬಸವಣ್ಣನ ತತ್ವವನ್ನು ಉಲ್ಲೇಖಿಸಿದ ಅವರು ಕಲಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಶರಣ ತತ್ವ ಶ್ರೇಷ್ಠವಾದುದು ಎಂದಿದ್ದಾರೆ. ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಇತಿಹಾಸ ಮತ್ತು ವಿಚಾರಧಾರೆಗಳ ಅಧ್ಯಯನ ಮಾಡುತ್ತಿರುವುದಾಗಿ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ