Select Your Language

Notifications

webdunia
webdunia
webdunia
webdunia

‘ಯಡಿಯೂರಪ್ಪರ ವಿಡಿಯೋ ಮಾಡಿಸಿದ್ದೇ ಸಿದ್ದರಾಮಯ್ಯ’

ಬಿ.ಎಸ್.ಯಡಿಯೂರಪ್ಪ
ಬಿಜೆಪಿ ಕೋರ್ ಕಮೀಟಿಯಲ್ಲಿ ನಡೆದ ಸಭೆಯ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಸಿದ್ದರಾಮಯ್ಯರ ಕೈವಾಡವಿದೆ.

ಹೀಗಂತ ಡಿಸಿಎಂ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸಿಡಿ ಮಾಡಿಸೋದ್ರಲ್ಲಿ ಚಾಣಾಕ್ಷರು. ಈ ಹಿಂದೆ ಎರಡು ಬಾರಿ ಸಿಡಿ ಮಾಡಿಸಿದ್ದಾರೆ ಎಂದು ದೂರಿದ್ರು.

ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ಮೊದಲು ಬಿಡಬೇಕು ಅಂತ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ರು.

ಸಿಎಂ ಬಿ.ಎಸ್.ಯಡಿಯೂರಪ್ಪರ ವಿಡಿಯೋ ಹಾಗೂ ಆಡಿಯೋವನ್ನು ತಿರುಚಲಾಗಿದೆ. ಅನರ್ಹ ಶಾಸಕರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಅಂತ ಯಡಿಯೂರಪ್ಪ ಹೇಳಿದ್ದು ನಿಜ ಅಂತ ಡಿಸಿಎಂ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಟಾಂಗ್ ನೀಡಿದ ಹೆಚ್.ಡಿ.ಕುಮಾರಸ್ವಾಮಿ