Publish Date: Tue, 05 Nov 2019 (18:36 IST)
Updated Date: Tue, 05 Nov 2019 (18:37 IST)
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ.
ಬಿಜೆಪಿ ಭಾರತದ ವಿಲನ್ ಪಕ್ಷವಾಗಿದೆ. ಹೀಗಂತ ಆರೋಪ ಕೇಳಿಬಂದಿದೆ.
ಮಂಗಳೂರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ಬಿಜೆಪಿ ದೇಶದ ಜನರ ಪಾಲಿಗೆ ಖಳನಾಯಕ್ ಆಗಿದೆ. ದೇಶದ ಆರ್ಥಿಕತೆ ಸತ್ತಿದೆ ಎಂದು ಆರ್ ಬಿಐ ವರದಿ ಹೇಳಿದೆ ಎಂದ್ರು.
ಆರ್ ಎಸ್ ಎಸ್ ಮುಖಂಡರು ಆರ್ಥಿಕತೆ ಅಭಿವೃದ್ಧಿಯಾಗಿದೆ ಅಂತಿದ್ದಾರೆ. ಮನಮೋಹನ್ ಸಿಂಗ್ ರಿಂದ ಆರ್ಥಿಕತೆ ಬಗ್ಗೆ ಬಿಜೆಪಿ ಕಲಿಯಲಿ ಅಂತ ಸಲಹೆ ನೀಡಿದ್ರು.
ಆರ್ಥಿಕತೆ ಮೇಲೆ ಸರ್ಕಸ್ ಮಾಡಿ ಬಿಜೆಪಿ ಜನರ ಬಾಳಲ್ಲಿ ಚೆಲ್ಲಾಟವಾಡಿದೆ ಅಂತ ಟೀಕೆ ಮಾಡಿದ್ರು.