Select Your Language

Notifications

webdunia
webdunia
webdunia
webdunia

ಆಮರಣ ಉಪವಾಸ ಸತ್ಯಾಗ್ರಹ ಶುರುಮಾಡಿದ ಸಂತ್ರಸ್ತರು: ಸರಕಾರಕ್ಕೆ ಶಾಕ್

ಆಮರಣ ಉಪವಾಸ ಸತ್ಯಾಗ್ರಹ ಶುರುಮಾಡಿದ ಸಂತ್ರಸ್ತರು: ಸರಕಾರಕ್ಕೆ ಶಾಕ್
ಅಥಣಿ , ಶುಕ್ರವಾರ, 1 ನವೆಂಬರ್ 2019 (17:36 IST)
ಕೃಷ್ಣಾ ನದಿಯ ಹಿಪ್ಪರಗಿ ಆಣೆಕಟ್ಟೆ ಹಿನ್ನೀರಿನಿಂದ ತೀವ್ರ ತೊಂದರೆಗೆ ಒಳಗಾದ ಜನರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಕೃಷ್ಣಾ ನದಿಯ ಹಿಪ್ಪರಗಿ ಆಣೆಕಟ್ಟೆ ಹಿನ್ನೀರಿನಿಂದ ಬಾಧಿತವಾಗಿರುವ ಕವಟಕೊಪ್ಪ ಗ್ರಾಮದ 900 ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.

ಅಥಣಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಆವರಣದಲ್ಲಿ  ಪ್ರತಿಭಟನೆ ನಡೆಸಲಾಗುತ್ತಿದ್ದು, ಉಪವಾಸ ಸತ್ಯಾಗ್ರಹ  ಎರಡನೇ ದಿನಕ್ಕೆ ಮುಂದುವರೆದಿದೆ.

ಅಧಿಕಾರಿಗಳು ಸರ್ವೇ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ ಎಂದು ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ತಿ ಗ್ರಾಮದ ಹೊರವಲಯದಲ್ಲಿ ಜಮಖಂಡಿ ತಾಲ್ಲೂಕು ಹಿಪ್ಪರಗಿಯಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿದ್ದು, ಈ
ಆಣೆಕಟ್ಟೆ ಹಿನ್ನೀರಿನಿಂದಾಗಿ ಬಾಧಿತವಾಗಿರುವ ಕವಟಕೊಪ್ಪ ಗ್ರಾಮದ 162 ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ.

ಅಷ್ಟೇ ಅಲ್ಲದೆ ಸಪ್ತಸಾಗರ, ತೀರ್ಥ, ಇಂಗಳಗಾಂವ, ದರೂರ, ಅವರಕೋಡ, ಕುಸನಾಳ, ಮಳವಾಡ, ಶೇಗುಣಸಿ, ಬಣಜವಾಡ, ಕಾತ್ರಾಳ ಸೇರಿದಂತೆ ಇಪ್ಪತ್ತಾರು ಗ್ರಾಮಗಳ ಗ್ರಾಮಸ್ಥರಿಗೆ ಇನ್ನೂ ಕೂಡ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ.  

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಮಾರ್ಗದಲ್ಲಿ ರೈಲು ಸಂಚಾರ ಖಾಯಂ ರದ್ದು