Publish Date: Fri, 01 Nov 2019 (17:30 IST)
Updated Date: Fri, 01 Nov 2019 (17:32 IST)
ಹುಬ್ಬಳ್ಳಿ–ಬೆಳಗಾವಿ ರೈಲು ಸಂಚಾರ ಖಾಯಂ ಆಗಿ ರದ್ದುಗೊಂಡಿದೆ.
ಮೈಸೂರಿನ ಅಶೋಕಪುರಂ–ಹುಬ್ಬಳ್ಳಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿ ವರೆಗೆ ವಿಸ್ತರಿಸಲಾಗಿದೆ. ಇದರಿಂದ ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಹುಬ್ಬಳ್ಳಿ–ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ರೈಲಿನ ಸೌಲಭ್ಯವನ್ನು ಖಾಯಂ ಆಗಿ ರದ್ದು ಮಾಡಲಾಗಿದೆ. ಹೀಗಂತ ನೈರುತ್ಯ ರೈಲ್ವೆ ತಿಳಿಸಿದೆ.
ಮಹಾರಾಷ್ಟ್ರದ ಮಂಕಿ ಹಿಲ್–ಮುಂಬೈ ಸಮೀಪದ ಕರ್ಜತ್ ನಡುವೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ನ. 3 ರಿಂದ 6, 10 ರಿಂದ 13, 17 ರಿಂದ 20 ಮತ್ತು 24 ರಿಂದ 27ರ ವರೆಗೆ ಮುಂಬೈ (ಛತ್ರಪತಿ ಶಿವಾಜಿ ಟರ್ಮಿನಸ್)–ವಿಜಯಪುರ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ನ. 11 ರಿಂದ 14, 18 ರಿಂದ 21 ಮತ್ತು 25 ರಿಂದ 28ರ ವರೆಗೆ ವಿಜಯಪುರ–ಮುಂಬೈ ಪ್ಯಾಸೆಂಜರ್ ಸಂಚಾರ ರದ್ದಾಗಿದೆ.