Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಾಕ್ಸ್ ಸ್ಫೋಟ ಪ್ರಕರಣ: ದಾಖಲಾಗದ FIR

Train station
ಹುಬ್ಬಳ್ಳಿ , ಮಂಗಳವಾರ, 22 ಅಕ್ಟೋಬರ್ 2019 (19:08 IST)
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ.  

ವಿಚಾರಣೆ ನಡೆಸಲಾಗುತ್ತಿದ್ದು, ಈವರೆಗೆ ಯಾರ ಮೇಲೂ ಎಫ್ ಐಆರ್ ದಾಖಲಾಗಿಲ್ಲ. ಹೀಗಂತ ಆರ್ ಪಿ ಎಫ್ ಡಿಜಿ ಅರುಣಕುಮಾರ ಚೌರಾಸಿ ಹೇಳಿದ್ದಾರೆ.

ಮರಳಿನ ಚೀಲಗಳಲ್ಲಿ ಮುಚ್ಚಿ ಹಾಕಲಾಗಿರುವ ಬಾಕ್ಸ್ ಗಳಲ್ಲಿ ಏನಿದೆ? ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಈ ಬಗ್ಗೆ ಕೊಲ್ಹಾಪುರದಿಂದ ಬರುವ ತಂಡ ತನಿಖೆ ನಡೆಸಲಿದೆ ಎಂದರು.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ  ಎಮ್ ಎಲ್ ಎ ಹೆಸರು ಕೇಳಿಬರುತ್ತಿದ್ದು, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ ಮಹಾರಾಷ್ಟ್ರ ಚುನಾವಣೆಗೂ ಇದಕ್ಕೂ ಸಂಬಂಧ ಇದೆ ಎಂಬ ಬಗ್ಗೆ ತನಿಖೆ ನಡೆಸಿದ ನಂತರವೇ ಸತ್ಯ ಗೊತ್ತಾಗಲಿದೆ. ಈ ವರೆಗೆ ಯಾರ ಮೇಲೂ ಕೇಸ್ ಮತ್ತು ವಶಕ್ಕೆ ಪಡೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ರಾತ್ರಿಗೆ ಗಡಗಡ ನಡುಗಿದ ಮಂಡ್ಯ