Select Your Language

Notifications

webdunia
webdunia
webdunia
webdunia

ಕೃಷ್ಣಾ ತೀರದಲ್ಲಿ ಮಾಜಿ ಸಿ ಎಮ್ ಕುಮಾರಸ್ವಾಮಿ ದೀಪಾವಳಿ ಆಚರಣೆ

webdunia
ಸೋಮವಾರ, 28 ಅಕ್ಟೋಬರ್ 2019 (18:00 IST)
ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮಾಜಿ ಸಿ ಎಮ್ ಕುಮಾರಸ್ವಾಮಿ ಸಂಚರಿಸಿ, ಸಂತ್ರಸ್ತರ ಜೊತೆ ತಮ್ಮ ದೀಪಾವಳಿ ಆಚರಿಸಿದರು.
 

ಚಿಕ್ಕೋಡಿ ತಾಲೂಕಿನ ಮಾಂಜರಿ, ಕಾಗವಾಡ ತಾಲೂಕಿನ ಜುಗುಳ ಹಾಗೂ ಅಥಣಿ ತಾಲೂಕಿನ ದರೂರ ಮತ್ತು ಸತ್ತಿ ಗ್ರಾಮಗಳಲ್ಲಿ ಸಂಚರಿಸಿದ ಅವರು, ಜನರ ಅಳಲು ಆಲಿಸಿ ಸರ್ಕಾರದ ಪರಿಹಾರ ಸಮರ್ಪಕವಾಗಿ ತಲುಪಿದೆಯಾ ಅಂತ ವಿಚಾರಿಸಿದರು.  

ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಕೊಡುವ ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಮನೆ ಕಟ್ಟಲು ಸಾಧ್ಯವಾ? ಬೆಳೆ ಪರಿಹಾರ ಸಮರ್ಪಕವಾಗಿದೆಯಾ? ಎನ್ನುವ ಮಾಹಿತಿಯನ್ನು ಕಲೆ ಹಾಕಲು ಬಂದಿದ್ದೇನೆ. ಈ ಭಾಗದ ಜನರ ನೋವು ಸಂಕಷ್ಟವನ್ನ ಸರ್ಕಾರದ ಮುಂದೆ ಇಡಲಿದ್ದೇನೆ. ಸರ್ಕಾರ ಕೆಲಸ ಮಾಡದೇ ಇದ್ದರೆ ಹೋರಾಟ ರೂಪಿಸಬೇಕಾಗುತ್ತದೆ.

ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ ಎಂದರು. ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನ ಜನರು ಸಂಕಷ್ಟದಲ್ಲಿ ಇದ್ದಾರೆ. ಅದಕ್ಕೆ ಸರ್ಕಾರ ಸ್ಪಂದಿಸಬೇಕು. ಚುನಾವಣೆ ಬೇಕಾದರೆ ಮುಂದೂಡಲಿ ಎಂದರು.Share this Story:

Follow Webdunia Hindi

ಮುಂದಿನ ಸುದ್ದಿ

ಟಿಕ್ ಟಾಕ್ ನಿಂದ ಹೊರಬಿತ್ತು ಗಂಡನ ಅಕ್ರಮ ಸಂಬಂಧ