Select Your Language

Notifications

webdunia
webdunia
webdunia
webdunia

ಗಾಂಜಾಕ್ಕೆ ಹಣ ಕೊಡದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

webdunia
ಗುರುವಾರ, 7 ನವೆಂಬರ್ 2019 (09:25 IST)
ಬೆಂಗಳೂರು : ಗಾಂಜಾಗೆ  50ರೂ ಕೊಡದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯ ಮೋದಿ ರಸ್ತೆ ಬಳಿ ನಡೆದಿದೆ.
ಮಹಮ್ಮದ್ ವಾಸಿಂ(16) ಕೊಲೆಯಾದ ಬಾಲಕ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಕೆಲಸ ಮುಗಿಸಿ ಮನೆ ಹೋಗುವಾಗ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಾಸಿಂನನ್ನು ಅಡ್ಡಗಟ್ಟಿ ಗಾಂಜಾಗೆ 50ರೂ ಕೊಡುವಂತೆ ಕೇಳಿದ್ದಾರೆ. ಆಗ ಹಣವಿಲ್ಲ ಎಂದಿದ್ದಕ್ಕೆ ಚಾಕುವಿನಿಂದ ಆತನ ಎದೆಗೆ ಇರಿದು ಪರಾರಿಯಾಗಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia Hindi

ಮುಂದಿನ ಸುದ್ದಿ

ಇಲ್ಲಿ ನ ಪ್ರಕೃತಿ ಸೌಂದರ್ಯದ ಫೋಟೋ ತೆಗೆದರೆ ದಂಡ ವಿಧಿಸಲಾಗುತ್ತದೆ