Select Your Language

Notifications

webdunia
webdunia
webdunia
webdunia

ಇಲ್ಲಿನ ಪ್ರಕೃತಿ ಸೌಂದರ್ಯದ ಫೋಟೋ ತೆಗೆದರೆ ದಂಡ ವಿಧಿಸಲಾಗುತ್ತದೆ

ಇಲ್ಲಿನ ಪ್ರಕೃತಿ ಸೌಂದರ್ಯದ ಫೋಟೋ ತೆಗೆದರೆ ದಂಡ ವಿಧಿಸಲಾಗುತ್ತದೆ
ಪಣಜಿ , ಗುರುವಾರ, 7 ನವೆಂಬರ್ 2019 (09:23 IST)
ಪಣಜಿ: ಸುಂದರವಾದ ಪ್ರಕೃತಿ ಸೌಂದರ್ಯವನ್ನು ಕಂಡಾಗ ಎಲ್ಲರೂ ಒಂದು ಫೋಟೋವನ್ನು ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಈ ಪ್ರದೇಶದಲ್ಲಿ  ಪ್ರಕೃತಿ ಸೌಂದರ್ಯದ ಫೋಟೊ ತೆಗೆದರೆ ಶುಲ್ಕ ತೆರಬೇಕಾಗುತ್ತದೆ.




ಹೌದು. ಗೋವಾದ ಪರ್ರಾ ಗ್ರಾಮ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ರಸ್ತೆ ಬದಿಯಲ್ಲಿ ಸುಂದರವಾದ ತೆಂಗಿನ ಮರಗಳನ್ನು ಬೆಳೆಸಲಾಗಿದೆ. ಈ ಸುಂದರ ರಮಣೀಯ ದೃಶ್ಯವನ್ನು ನೋಡಿದಾಕ್ಷಣ ಒಂದು ಫೋಟೊ ತೆಗೆಯಬೇಕೆನಿಸುತ್ತದೆ.


ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಇಲ್ಲಿ ಫೋಟೊ ತೆಗೆದವರಿಗೆ 100ರೂನಿಂದ 500ರೂ.ಶುಲ್ಕ ವಿಧಿಸಲಿದೆ. ಇದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸ್ವಚ್ಛತಾ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯ; ಮುಖ್ಯ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್