ಮುಂಬೈ: ನಟಿ ದೀಪಿಕಾ ಪಡುಕೋಣೆ ಮದುವೆಯಾದ ದಿನದಿಂದಲೂ ಎಲ್ಲೇ ಹೋದರೂ ಜನ ಆಕೆಯನ್ನು ಮಗು ಯಾವಾಗ ಮಾಡಿಕೊಳ್ಳುತ್ತೀರಿ ಎಂದೇ ಪ್ರಶ್ನೆ ಕೇಳುತ್ತಿರುತ್ತಾರೆ.
ಇದೀಗ ಮತ್ತೆ ದೀಪಿಕಾ ಪ್ರಕಟಿಸಿದ ಫೋಟೋ ಒಂದರಿಂದ ಮತ್ತೆ ನೆಟ್ಟಿಗರು ಅದೇ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ದೀಪಿಕಾ ತಾವು ಮಗುವಾಗಿದ್ದಾಗ ತೆಗೆಸಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಕ್ಕೆ ಜನ ಹೀಗೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.
ಕೆಲವರಂತೂ ಕಂಗ್ರಾಜ್ಯುಲೇಷನ್ ಎನ್ನುತ್ತಿದ್ದಾರೆ. ಮತ್ತೆ ಕೆಲವರು ದೀಪಿಕಾ ಗರ್ಭಿಣಿಯಾಗಿದ್ದಿರಬೇಕು. ಅದಕ್ಕೇ ತಾವು ಮಗುವಾಗಿರುವಾಗ ತೆಗೆದ ಫೋಟೋ ಹಾಕಿದ್ದಾರೆ ಎಂದು ಗೆಸ್ ಮಾಡುತ್ತಿದ್ದಾರೆ. ಆದರೆ ದೀಪಿಕಾ ಅದ್ಯಾವ ಉದ್ದೇಶಕ್ಕೆ ಈ ಫೋಟೋ ಪ್ರಕಟಿಸಿದರೋ ಆಕೆಗೇ ಗೊತ್ತು.