Publish Date: Sun, 03 Nov 2019 (11:21 IST)
Updated Date: Sun, 03 Nov 2019 (11:22 IST)
ನವದೆಹಲಿ: ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಸ್ಟಾರ್‍ಗಳಿಗೆ ಮಾತ್ರ ಫೋನ್ ಬಳಸಲು ಅವಕಾಶ ನೀಡಿದ್ದಕ್ಕೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿರುವ ಎಸ್ ಪಿಬಿ, ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನಿವಾಸದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಫೋನ್ ಗಳನ್ನು ಕಿತ್ತುಕೊಂಡರು. ಆದರೆ ಕೆಲವೇ ಕೆಲವು ಬಾಲಿವುಡ್ ನಟರಿಗೆ ಮಾತ್ರ ಫೋನ್ ಬಳಸಿ ಸೆಲ್ಫೀ ತೆಗೆಯಲೂ ಅವಕಾಶ ನೀಡಲಾಯಿತು. ಇಂತಹ ತಾರತಮ್ಯವೇಕೆ ಎಂದು ಎಸ್ ಪಿಬಿ ಅಸಮಾಧಾನ ತೋಡಿಕೊಂಡಿದ್ದಾರೆ.
ನಮಗೆ ಸೆಲ್ಫೀ ಬಿಡಿ, ಫೋನ್ ಕೂಡಾ ಜತೆಗೆ ಒಯ್ಯಲು ಅವಕಾಶ ನೀಡಲಾಗಿಲ್ಲ. ಆದರೆ ಬಾಲಿವುಡ್ ನಟರಿಗೆ ಮಾತ್ರ ಈ ಅವಕಾಶ ನೀಡಿ ತಾರತಮ್ಯವೆಸಗಿಸಲಾಯಿತು ಎಂದು ಎಸ್ ಪಿಬಿ ಆರೋಪಿಸಿದ್ದಾರೆ. ಇತ್ತೀಚೆಗೆ ನಟಿ ಖುಷ್ಬೂ ಕೂಡಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದೇ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಟರನ್ನು ಕಡೆಗಣಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.