Publish Date: Sat, 08 Dec 2018 (16:20 IST)
Updated Date: Sat, 08 Dec 2018 (20:20 IST)
ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದ ಬಳಿ ವಾಟಾಳ ನಾಗರಾಜ್ ಬಂಧನವಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ರನ್ನು ಪೊಲೀಸರು ಬಂಧಿಸಿ, ಆ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ವಾಟಾಳ್, ಸರಕಾರದ 10 ಕ್ಕೂ ಹೆಚ್ಚು ಸಚಿವರು ವಿಮಾನದ ಮೇಲೆ ಹಾರಾಡುತ್ತಿದ್ದಾರೆ.
ಪ್ರಖ್ಯಾತ್ ವೈದ್ಯರೊಬ್ಬರು ಶಾಸಕರು, ಸಚಿವರಿಗೆ ಚಿಕಿತ್ಸೆ ನೀಡಬೇಕಿದೆ. ಸಚಿವರು ರಸ್ತೆಯ ಮೇಲೆ ಪ್ರಯಾಣ ಮಾಡುತ್ತಿಲ್ಲ. ಅವರು ವಿಮಾನದಲ್ಲಿ ಆಕಾಶದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ದೂರಿದರು.
ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಈ ಹೋರಾಟ ನಡೆಯುತ್ತಿದೆ ಎಂದು ವಾಟಾಳ್ ಹೇಳಿದರು. ಉತ್ತರ ಕರ್ನಾಟಕ ಭಾಗದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಆಗ್ರಹ ಮಾಡಿದರು.