Publish Date: Sat, 08 Dec 2018 (16:06 IST)
Updated Date: Sat, 08 Dec 2018 (16:08 IST)
ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಅಸ್ಥಿ ವಿಸರ್ಜನೆ ನಡೆಯಿತು.
ಕಲಬುರಗಿ ಜಿಲ್ಲೆಯ ಸುಪ್ರಸಿದ್ಧ ಗಾಣಗಾಪುರ ಹತ್ತಿರದ ಸಂಗಮ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅಸ್ಥಿ ವಿಸರ್ಜನೆ ನಡೆಯಿತು.
ಉದ್ಯಾನ್ ಎಕ್ಸಪ್ರೆಸ್ ರೈಲಿನ ಮೂಲಕ ಅಸ್ಥಿಯನ್ನು ತೆಗೆದುಕೊಂಡು ಕಲಬುರಗಿಗೆ ಬಂದ ಬಿಜೆಪಿ ಮುಖಂಡರು, ಅದನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.
ನಂತರ ಗಾಣಾಗಾಪುರಕ್ಕೆ ಕೊಂಡೊಯ್ದು ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿ ಅಸ್ಥಿ ವಿಸರ್ಜನೆ ನೆರವೇರಿಸಿದರು.
ಅಗಲಿದ ಅನಂತಕುಮಾರ್ ಗೆ ಅಭಿಮಾನಿಗಳಿಂದ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆಯಾಯಿತು.