Publish Date: Wed, 28 Nov 2018 (10:56 IST)
Updated Date: Wed, 28 Nov 2018 (11:04 IST)
ಬೆಂಗಳೂರು: ಶನಿವಾರ ನಿಧನರಾದ ಹಿರಿಯ ನಟ ಅಂಬರೀಶ್ ಅಸ್ಥಿ ಸಂಗ್ರಹ, ಹಾಲು ತುಪ್ಪ ಬಿಡುವ ಕಾರ್ಯಕ್ರಮ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯಲ್ಲಿ ನಡೆಯುತ್ತಿದೆ.
ಪುರೋಹಿತರ ಮಾರ್ಗದರ್ಶನದಂತೆ ಅಂಬರೀಶ್ ಪುತ್ರ ಅಭಿಷೇಕ್ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬರೀಶ್ ಕುಟುಂಬದ ಜತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟ ದೊಡ್ಡಣ್ಣ ಕೂಡಾ ಕಾರ್ಯಗಳಲ್ಲಿ ನೆರವಾಗಿದ್ದಾರೆ.
ಅಂಬರೀಶ್ ನಿಧನರಾದ ಸುದ್ದಿ ತಿಳಿದಾಗಿನಿಂದಲೂ ಅಂಬಿ ಕುಟುಂಬದ ಜತೆಗೇ ಇದ್ದ ರಾಕ್ ಲೈನ್ ವೆಂಕಟೇಶ್ ಇಂದೂ ಕೂಡಾ ಕುಟುಂಬದವರ ಜತೆಗೇ ಆಗಮಿಸಿ ಅಸ್ಥಿ ಸಂಗ್ರಹ ಕಾರ್ಯಕ್ಕೆ ನೆರವಾದರು. ಕೊಂಚ ತಡವಾಗಿ ಆಗಮಿಸಿದ ದರ್ಶನ್ ಕೂಡಾ ಬಳಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೊನ್ನೆಯಿಂದ ಸಕ್ರಿಯರಾಗಿದ್ದ ರಾಕಿಂಗ್ ಸ್ಟಾರ್ ಯಶ್ ಇಂದು ಆಗಮಿಸಿರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.