Select Your Language

Notifications

webdunia
webdunia
webdunia
webdunia

ವಂದೇ ಭಾರತ್ ಎಕ್ಸ್ಪ್ರೆಸ್ : ನ.11ಕ್ಕೆ ಮೋದಿ ಚಾಲನೆ

ವಂದೇ ಭಾರತ್ ಎಕ್ಸ್ಪ್ರೆಸ್ :  ನ.11ಕ್ಕೆ ಮೋದಿ ಚಾಲನೆ
ಬೆಂಗಳೂರು , ಶುಕ್ರವಾರ, 4 ನವೆಂಬರ್ 2022 (07:17 IST)
ಬೆಂಗಳೂರು : ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಚಾಲನೆಗೆ ದಿನಗಣನೆ ಶುರುವಾಗಿದೆ.

ಇದೇ ತಿಂಗಳು 11 ರಂದು ದೇಶದ ಐದನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ದಕ್ಷಿಣ ಭಾರತದಲ್ಲಿ ಮೊದಲ ಸಂಚಾರ ಆರಂಭಿಸಲಿರುವ ಎಕ್ಸ್ಪ್ರೆಸ್ ಇದಾಗಲಿದೆ. ಮೈಸೂರಿನಿಂದ ಚೆನ್ನೈಗೆ, ಚೆನ್ನೈ ಟು ಮೈಸೂರು ಸಂಚಾರ ಮಾಡಲಿದೆ.

16 ಬೋಗಿಗಳನ್ನ ಒಳಗೊಂಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದೆ. ಮೈಸೂರು-ಚೆನ್ನೈ ನಡುವಿನ ಸಂಚಾರ ದರ ಎಕಾನಮಿ ಕ್ಲಾಸ್ ದರ 921 ರೂ. ಆಗಿದೆ. 

ಉಭಯ ನಗರಗಳ ನಡುವಿನ ಪ್ರಯಾಣ ಸಮಯ 6 ಗಂಟೆ 40 ನಿಮಿಷ ಬೇಕಾಗುತ್ತೆ. ಮೈಸೂರು ಟು ಬೆಂಗಳೂರಿನ ನಡುವಿನ ಪ್ರಯಾಣ 2 ಗಂಟೆ ಆಗುತ್ತೆ. ವಂದೇ ಭಾರತ್ ರೈಲಿನ ವೇಗ 170 ಕಿಮೀ ಇದೆಯಾದರೂ, ಉಭಯ ನಗರಗಳ ಮಧ್ಯ 75 ಕಿಮೀ ವೇಗದಲ್ಲಿ ರೈಲು ಸಂಚರಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಊಹಾಪೋಹಗಳಿಗೆ ಮಮತಾ ಬ್ಯಾನರ್ಜಿ ತೆರೆ