Select Your Language

Notifications

webdunia
webdunia
webdunia
webdunia

ಸಂಯುಕ್ತ ಕಿಸಾನ್ ಮೋರ್ಚ್ ಸೆ.27ರಂದು ಭಾರತ್ ಬಂದ್‍ಗೆ ಕರೆ

ಸಂಯುಕ್ತ ಕಿಸಾನ್ ಮೋರ್ಚ್ ಸೆ.27ರಂದು ಭಾರತ್ ಬಂದ್‍ಗೆ ಕರೆ
bangalore , ಶನಿವಾರ, 25 ಸೆಪ್ಟಂಬರ್ 2021 (22:20 IST)
ಸಂಯುಕ್ತ ಕಿಸಾನ್ ಮೋರ್ಚ್ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ರೈತ ಸಂಘಟನೆ ನೇತೃತ್ವದಲ್ಲಿ ಎರಡೂವರೆ ಸಾವಿರ ಜನರು ಶೇಷಾದ್ರಿ ರಸ್ತೆಯ ಮೌರ್ಯ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮುಖಾಂತರ ಫ್ರೀಡಂ ಪಾರ್ಕ್‍ವರೆಗೆ ಸಾಗಿ, ನಂತರ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು ಜಮಾವಣೆಗೊಂಡು ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬಂದ್ ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ-ವಿಭಾಗದ ವ್ಯಾಪ್ತಿಗೆ ಒಳಪಡುವ ಹಲಸೂರು ಗೇಟ್ ಸಂಚಾರ ಪೆÇಲೀಸ್ ಠಾಣಾ ಸರಹದ್ದಿಗೆ ಸೇರಿರುವ ಕೆ.ಜಿ.ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೃಪತುಂಗ ರಸ್ತೆಯ ಕೆ.ಆರ್ ವೃತ್ತದಿಂದ ಪೆÇಲೀಸ್ ಕಾರ್ನರ್‍ವರೆಗೆ ಹಾಗೂ ಪೆÇಲೀಸ್ ಕಾರ್ನರ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ ವಾಹನಗಳ ಸಂಚಾರಕ್ಕೆ ಮಾರ್ಪಾಡು ಮಾಡಲಾಗಿದೆ. ಈ ಸಂಚಾರ ಮಾರ್ಪಾಡುಗಳು ಸೆ.27ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ.
ಸಂಚಾರ ನಿಷೇಧ:
ಹಲಸೂರು ಗೇಟ್ ಪೆÇಲೀಸ್ ಠಾಣೆ ಕಡೆಯಿಂದ ಬಂದು ಪೆÇಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ನೃಪತುಂಗ ರಸ್ತೆ ಮೂಲಕ ಬಂದು ಪೆÇಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗದಲ್ಲೂ ಸಂಚಾರ ನಿಷೇಧಿಸಲಾಗಿದೆ.
ಪರ್ಯಾಯ ವ್ಯವಸ್ಥೆ:
ಹಲಸೂರು ಗೇಟ್ ಪೆÇಲೀಸ್ ಠಾಣೆ ಕಡೆಯಿಂದ ಬಂದು ಪೆÇಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಳ್ಳಬೇಕು. ನಂತರ ಕೆ.ಜಿ. ರಸ್ತೆಗೆ ಕಡೆಗೆ ಸಾಗುವ ವಾಹನಗಳು ಪೆÇಲೀಸ್ ಕಾರ್ನರ್ ವೃತ್ತದಿಂದ ನೇರವಾಗಿ ನೃಪತುಂಗ ರಸ್ತೆಗೆ ಪ್ರವೇಶ ತೆಗೆದುಕೊಳ್ಳಬೇಕು. ನೃಪತುಂಗ ರಸ್ತೆಯಲ್ಲಿ ಸಾಗಿ ಕೆ.ಆರ್ ವೃತ್ತ ತಲುಪಿ ಮುಂದುವರೆಯಲು ಅನುವು ಮಾಡಿಕೊಡಲಾಗಿದೆ.  
ಕೆ.ಆರ್. ಸರ್ಕಲïನಿಂದ ನೃಪತುಂಗ ರಸ್ತೆಯಲ್ಲಿ ಬಂದು ಪೆÇಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದುಕೊಳ್ಳಬಹುದು. ಕೆ.ಜಿ.ರಸ್ತೆಗೆ ಸಾಗುವ ಸಂಚಾರ ನಿಷೇಧಿಸಿರುವುದರಿಂದ ಕೆ.ಆರ್.ವೃತ್ತದಿಂದ ಶೇಷಾದ್ರಿ ರಸ್ತೆಯಲ್ಲಿ ಸಾಗಿ ಮುಂದುವರೆಯಲು ಅನುವು ಮಾಡಿಕೊಡಲಾಗಿದೆ.
 
ದ್ವಿಮುಖ ಸಂಚಾರ ವ್ಯವಸ್ಥೆ:
ನೃಪತುಂಗ ರಸ್ತೆಯಲ್ಲಿ ಕೆ.ಆರ್.ವೃತ್ತದ ಕಡೆಯಿಂದ ಪೆÇಲೀಸ್ ಕಾರ್ನರ್ ವೃತ್ತದ ಕಡೆಗೆ ಪ್ರಸ್ತುತ ಜÁರಿಯಲ್ಲಿರುವ ಏಕ ಮುಖ ಸಂಚಾರವನ್ನು ದ್ವಿಮುಖ ಸಂಚಾರ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗುತ್ತದೆ. ಅದರಂತೆ ಕೆ.ಆರ್ ವೃತ್ತದಿಂದ ಪೆÇಲೀಸ್ ಕಾರ್ನರ್ ವೃತ್ತದವರೆಗೆ ಮತ್ತು ಪೆÇಲೀಸ್ ಕಾರ್ನರ್ ವೃತ್ತದಿಂದ ಕೆ.ಆರ್ ವೃತ್ತದ ವರೆಗೆ ರಸ್ತೆಯ ಎರಡು ದಿಕ್ಕಿನಲ್ಲೂ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಚಾರ ಪೆÇಲೀಸರು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್-19ನಿಂದ ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ತಪಾಸಣೆಗೆ ಬ್ರೇಕ್ ಹಾಕಿದ್ದ ನಗರ ಸಂಚಾರ ಪೊಲೀಸರು