ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಹೋಗುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಅಡಚಣೆಯಾಗುವ ರೀತಿ ವಾಹನ ನಿಲ್ಲಿಸಿರುವುದು ಕಂಡು ಬಂದರೆ ಅಂತಹ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಪ್ರತಿ ವಾರದಂತೆ ಶನಿವಾರ ಕೋರಮಂಗಲ ಪೆÇಲೀಸ್ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋರಮಂಗಲದ 1, 5 ಮತ್ತು 8ನೇ ಬ್ಲಾಕ್ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡು ಆಯುಕ್ತರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
``ಸಾರ್ವಜನಿಕ ಸ್ಥಳಗಳು ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬ ನಾಗರಿಕರೂ ಇತರರಿಗೆ ತೊಂದರೆ ನೀಡದಂತೆ ವಾಹನ ಪಾರ್ಕಿಂಗ್ ಮಾಡಬೇಕು,'' ಎಂದು ಅವರು ಸಲಹೆ ಮಾಡಿದರು.
ರಾತ್ರಿ 11 ಗಂಟೆ ನಂತರ ಯುವಕರು ಹೆಚ್ಚಿನ ಶಬ್ಧ ಬರುವ ಹಾರ್ನ್ ಹಾಗೂ ಸೈಲೆನ್ಸರ್ ಹಾಕಿಕೊಂಡು ಶಾಂತಿ ಭಂಗ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ``ಯಾವ ಪ್ರದೇಶದಲ್ಲಿ ಯುವಕರು ಆ ರೀತಿ ಬೈಕ್ ಚಲಾಯಿಸುತ್ತಾರೆ ಎಂಬ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದರೆ ಕೂಡಲೇ ಅಂತಹವರ ವಾಹನಗಳನ್ನು ಸೀಜ್ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು," ಎಂದರು. ಅಲ್ಲದೆ, ಅಂತಹ ಕಡೆಗಳಲ್ಲಿ ಹೆಚ್ಚು ಗಸ್ತು ತಿರುಗುವಂತೆ ಪೆÇಲೀಸರಿಗೆ ಸೂಚಿಸಿದರು.
ಮಕ್ಕಳ ಅಪಹರಣ ಬಗ್ಗೆ ಎಚ್ಚರ:
ಕೋರಮಂಗಲದ ಒಂದನೇ ಹಂತದ ಉದ್ಯಾನದಲ್ಲಿ ಮಕ್ಕಳು ಆಟವಾಡುವಾಗ ದುಷ್ಕರ್ಮಿಗಳು ಆಮಿಷವೊಡ್ಡಿ ಅಪಹರಿಸಲು ಯತ್ನಿಸುತ್ತಾರೆ ಎಂದು ನಿವಾಸಿಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ``ಇದುವರೆಗೂ ಯಾವುದೇ ಮಗು ಅಪಹರಣವಾಗಿಲ್ಲ. ಆದರೆ, ಮಕ್ಕಳ ಅಪಹರಣ ವಿಚಾರದಲ್ಲಿ ಪೆÇಲೀಸರು ತುಂಬ ಜಾಗೃತರಾಗಿದ್ದಾರೆ. ಮುಂದೆಯೂ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರ ವಹಿಸಲಾಗುವುದು. ಉದ್ಯಾನಗಳಿರುವ ಸ್ಥಳಗಳಲ್ಲಿ ಸಬ್ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಗಸ್ತು ಹೆಚ್ಚಿಸಲಾಗುವುದು,'' ಎಂದರು.
ಅವೈಜ್ಞಾನಿಕ ರಸ್ತೆ ಉಬ್ಬು:
ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಲು ರಸ್ತೆ ಗುಂಡಿ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳೇ ಕಾರಣ ಎಂದು ಸಾರ್ವಜನಿಕರು ಕಮಲ್‍ಪಂತ್‍ಗೆ ದೂರಿದರು. ಇದಕ್ಕೆ ಉತ್ತರಿಸಿದ ಅವರು, ``ಕೆಲ ರಸ್ತೆಯಲ್ಲಿ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಯಾವ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಉಬ್ಬುಗಳಿವೆಯೋ ಅವುಗಳನ್ನು ಸಂಚಾರ ಪೆÇಲೀಸರು ಪರಿಶೀಲಿಸಿ ತೆರವುಗೊಳಿಸಲಿದ್ದಾರೆ," ಎಂದರು.
ಪೆÇಲೀಸ್ ಚೌಕಿ ನಿರ್ಮಿಸಿ:
ಕೋರಮಂಗಲದ ಯೂನಿಯನ್ ಬ್ಯಾಂಕ್ ಬಳಿ ಯಾವುದೇ ಪೆÇಲೀಸ್ ಚೌಕಿ ಇಲ್ಲ. ಪೆÇಲೀಸರು ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕು. ಹೀಗಾಗಿ, ಪೆÇಲೀಸ್ ಚೌಕಿ ನಿರ್ಮಿಸುವಂತೆ ಮನವಿ ಮಾಡಿದರು. ಶೀಘ್ರದಲ್ಲೇ ಅಲ್ಲಿ ಪೆÇಲೀಸ್ ಚೌಕಿ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್ಲೆಂದರಲ್ಲಿ ವಾಹನಗಳ ಟೋಯಿಂಗ್ ಮಾಡುತ್ತಾರೆ:
ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸುವುದೇ ತಡ, ಟೋಯಿಂಗ್ ಸಿಬ್ಬಂದಿ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಕೇವಲ ಐದು ಅಥವಾ ಹತ್ತು ನಿಮಿಷದ ಕೆಲಸಕ್ಕಾಗಿ ವಾಹನ ನಿಲ್ಲಿಸಿ ಕಚೇರಿಯೊಳಗೆ ಹೋಗಿ ಬರುವಷ್ಟರಲ್ಲೇ ವಾಹನ ಟೋಯಿಂಗ್ ಮಾಡಿರುತ್ತಾರೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಕೇಳಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ``ಸಂಚಾರ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೇ ವಾಹನ ಟೋಯಿಂಗ್ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಚಾರ ನಿಯಮ ಮಾಡಲಾಗಿದೆ. ಹೀಗಾಗಿ, ರಸ್ತೆಯಲ್ಲಿ ನಡೆದು ಹೋಗುವವರಿಗೆ, ಸಂಚರಿಸುವವರಿಗೆ ತೊಂದರೆಯಾಗುವಂತೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು ತಪ್ಪು. ಆದರೆ, ನಿಯಮ ಪಾಲಿಸುವ ಮೂಲಕವೇ ವಾಹನಗಳನ್ನು ಟೋಯಿಂಗ್ ಮಾಡಬೇಕು," ಎಂದು ಪೆÇಲೀಸರಿಗೆ ಸೂಚಿಸಿದರು.