Select Your Language

Notifications

webdunia
webdunia
webdunia
webdunia

ಅಫೀಮ್​​ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್​

ಅಫೀಮ್​​ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್​
bangalore , ಶನಿವಾರ, 25 ಸೆಪ್ಟಂಬರ್ 2021 (21:47 IST)
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಅಫೀಮ್​​ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್​ನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.6 ಕೆಜಿ ಅಫೀಮು ವಶಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 20ರಂದು ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯ ಆಟದ ಮೈದಾನದ ಸಮೀಪ ರಾಜಸ್ತಾನ ಮೂಲದ ವ್ಯಕ್ತಿಯು ಮಾದಕ ವಸ್ತು ಅಫೀಮು ಮಾರಾಟದಲ್ಲಿ ತೊಡಗಿದ್ದಾನೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್​​ಪೆಕ್ಟರ್​ ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಬಂಧಿತ ಆರೋಪಿ ಲಗ್ನ ಪತ್ರಿಕೆಗಳ ಡಿಸೈನರ್ : ಈ ಹಿಂದೆ ನಗರದ ನಾಗರತ್ನ ಪೇಟೆಯಲ್ಲಿ ಲಗ್ನ ಪತ್ರಿಕೆಗಳ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ರಾಜಸ್ತಾನದಿಂದ ಅಫೀಮು​​ ತಂದು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7ಮಂದಿ