Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಟಿಲ್ಲು ಗ್ಯಾಂಗ್ ಮೇಲೆ ಜೈಲಿನಲ್ಲೇ ಅಟ್ಯಾಕ್ ಮಾಡುವ ಸಾಧ್ಯತೆ

ಜೈಲಿನಲ್ಲಿರುವ ಟಿಲ್ಲು ಗ್ಯಾಂಗ್ ಮೇಲೆ ಜೈಲಿನಲ್ಲೇ ಅಟ್ಯಾಕ್ ಮಾಡುವ ಸಾಧ್ಯತೆ
bangalore , ಶನಿವಾರ, 25 ಸೆಪ್ಟಂಬರ್ 2021 (21:32 IST)
ದೆಹಲಿ ರೋಹಿಣಿ ಕೋರ್ಟ್ ಶೂಟೌಟ್ ಆದ ಬೆನ್ನಲ್ಲೆ ದೆಹಲಿ ಪೊಲೀಸ್ರು ಎಚ್ಚೆತ್ತುಕೊಂಡಿದ್ದಾರೆ. ಜೈಲಿನಲ್ಲಿರುವ ಟಿಲ್ಲು ಗ್ಯಾಂಗ್ ಮೇಲೆ ಜೈಲಿನಲ್ಲೇ ಅಟ್ಯಾಕ್ ಮಾಡುವ ಸಾಧ್ಯತೆ ಇರೋದ್ರಿಂದ ಜೈಲಿನೊಳಗೆ ಟೈಟ್ ಸೆಕ್ಯೂರಿಟಿ ಮಾಡಲಾಗಿದೆ. ಮೋಸ್ಟ್ಲಿ ಭಾರತದಲ್ಲೇ ಇದೇ ಮೊದಲ ಕೇಸ್ ಅನ್ಸುತ್ತೆ. ಜೈಲಿನಲ್ಲಿರುವ ಕ್ರಿಮಿನಲ್ ಗೆ ಫುಲ್ ಸೆಕ್ಯೂರಿಟಿ ಕೊಟ್ಟಿರೋದು. ಗ್ಯಾಂಗಸ್ಟರ್ ಜಿತೇಂದರ್ ಗೋಗಿ ಹತ್ಯೆಗೆ ಪ್ರತಿಕಾರವಾಗಿ ಜೈಲಿನಲ್ಲೇ ಟಿಲ್ಲುಗ್ಯಾಂಗ್ ಮುಗಿಸಲು ಗೋಗಿ ಟೀಮ್ ಪಣ ತೊಟ್ಟಿದೆ. 
ಹೀಗಾಗಿ ಜೈಲಿನಲ್ಲಿ ರಕ್ತಪಾತ ತಡೆಯಲು ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಹಾಗೂ ದೆಹಲಿಯಲ್ಲಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಇನ್ನೂ ರೋಹಿಣಿ ಕೋರ್ಟ್ ನ ಕೌಂಟರ್-ಎನ್ ಕೌಂಟರ್ ನ ಶಾಕ್ ನಿಂದ ದೆಹಲಿ ಜನ ಆಚೆ ಬಂದಿಲ್ಲ. ಕೋರ್ಟ್ ನಲ್ಲಿ ಭದ್ರತಾ ಲೋಪ ಆಗಿರೋದನ್ನಾ ಸ್ವತಃ ಪೊಲೀಸ್ ಕಮೀಷನರ್ ಅವರೇ ಒಪ್ಪಿಕೊಂಡಿದ್ದಾರೆ. ಮುಂದೆ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿಯೂ ಭರವಸೆ ನೀಡಿದ್ದಾರೆ. ಕೋರ್ಟ್ ಗಳಲ್ಲಿ ತಪಾಸಣೆ ಹೆಚ್ಚಿಸಲು ಬಾರ್ ಕೌನ್ಸಿಲ್ ಗಳ ಜೊತೆ ಮೀಟಿಂಗ್ ಮಾಡಿದ್ದು ಪರಸ್ಪರ ಸಹಕಾರ ನೀಡಲು ಒಪ್ಪಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿ