Select Your Language

Notifications

webdunia
webdunia
webdunia
webdunia

ವಿಶಿಷ್ಟ ಪತ್ರಿಕಾ ದಿನಾಚರಣೆ

ವಿಶಿಷ್ಟ ಪತ್ರಿಕಾ ದಿನಾಚರಣೆ
ಚಿಕ್ಕೋಡಿ , ಬುಧವಾರ, 4 ಜುಲೈ 2018 (17:10 IST)
ಚಿಕ್ಕೋಡಿ ಮಾಧ್ಯಮ ಮಿತ್ರರು ಸೇರಿಕೊಂಡು ವಿಶಿಷ್ಟವಾಗಿ ಪತ್ರಿಕಾ ದಿನಾಚರಣೆಯನ್ನ ಆಚರಿಸಿದರು. ಪತ್ರಿಕಾ ದಿನಾಚರಣೆ ನಿಮಿತ್ಯ ಚಿಕ್ಕೋಡಿ ಪಟ್ಟಣದ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ  ಸರಕಾರಿ ಪ್ರಾಥಮಿಕ ಶಾಲೆಯ 365 ಬಡ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸಗಳನ್ನ ಹಂಚುವದರ ಮೂಲಕ ಪತ್ರಿಕಾ ದಿನಾಚರಣೆಯನ್ನ ಆಚರಿಸಲಾಯಿತು.

ಚಿಕ್ಕೋಡಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಜಿ.ದಾಸರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಕಂಪಾಸ್ ಬಾಕ್ಸಗಳನ್ನ ವಿತರಿಸಿದರು. ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರು ಸೇರಿ ಸಂಗ್ರಹಿಸಿ ಬಡ ಮಕ್ಕಳಿಗೆ ಕಂಪಾಸ ಬಾಕ್ಸ್ ಹಂಚಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕೋಡಿ ಡಿಡಿಪಿಐ ಎಂ.ಜಿ.ದಾಸರ ಅವರು ಚಿಕ್ಕೋಡಿ ಪತ್ರಕರ್ತರೆಲ್ಲ ಸೇರಿ ಬಡ ಮಕ್ಕಳಿಗಾಗಿ ಹಣ ಸಂಗ್ರಹಿಸಿ ಕಂಪಾಸ್ ಬಾಕ್ಸ್ ನೀಡಿದ್ದು ನಿಜಕ್ಕೂ ಶ್ಲಾಘನೀಯ. ಸಮಾಜ ಒಳಿತು ಕೆಡುಕುಗಳನ್ನ ಜಗತ್ತಿಗೆ ತೋರಿಸುವ ಪತ್ರಕರ್ತರು ತಮ್ಮ ಒತ್ತಡದ ಜೀವನದ ಮಧ್ಯೆಯೂ ಸಮಾಜದ ಅಭಿವೃದ್ಧಿಗಾಗಿ ತೋರಿರುವ ಕಳಕಳಿ ಬೇರೆ ಅವರಿಗೂ ಮಾದರಿಯಾಗಿದೆ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರು ನೀಡಿದ ಇಂಜೆಕ್ಷನ್ ಗೆ ಬಾಣಂತಿ ಬಲಿ?