Webdunia - Bharat's app for daily news and videos

Install App

ಉಕ್ರೇನ್​​ ದಾಳಿ; 63 ರಷ್ಯಾ ಸೈನಿಕರು ಸಾವು

Webdunia
ಬುಧವಾರ, 4 ಜನವರಿ 2023 (18:01 IST)
ಉಕ್ರೇನ್​ ಮತ್ತು ರಷ್ಯಾ ನಡುವಣ ಯುದ್ಧ ಒಂದು ವರ್ಷ ಸಮೀಪಿಸುತ್ತಿದೆ. ಇದು ಅಪಾರ ಪ್ರಮಾಣದ ಪ್ರಾಣ, ಆಸ್ತಿ ಹಾನಿ ಉಂಟು ಮಾಡಿದೆ. ಹೊಸ ವರ್ಷಾಚರಣೆಯ ಮಧ್ಯೆಯೂ ಉಕ್ರೇನ್​ ನಡೆಸಿದ ಬಾಂಬ್​ ದಾಳಿಯಲ್ಲಿ ರಷ್ಯಾದ 63 ಸೈನಿಕರು ಸಾವನ್ನಪ್ಪಿದ್ದಾರೆ. 63 ಅಲ್ಲ 100ಕ್ಕೂ ಅಧಿಕ ಸೈನಿಕರು ಹತರಾಗಿದ್ದಾರೆಂದು ಉಕ್ರೇನ್​ ಹೇಳಿಕೊಂಡಿದೆ. ಡೊನೆಟ್ಸ್ಕ್‌ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್‌ನ 6 ರಾಕೆಟ್‌ಗಳಿಂದ ದಾಳಿ ಮಾಡಿವೆ. ಇದರಲ್ಲಿ ನಮ್ಮ 63 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ನಾಲ್ಕು ರಾಕೆಟ್​ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾ ಪಡೆಗಳನ್ನೇ ಗುರಿಯಾಗಿಸಿಕೊಂಡು ಉಕ್ರೇನ್​ ಶಿಪಿಲೋವ್ಕಾ, ಲಿಮನ್, ಸ್ಕೆಲ್ಕಿ ಪ್ರದೇಶಗಳ ಮೇಲೆ ನಿರಂತರ ರಾಕೆಟ್​ ದಾಳಿ ನಡೆಸಿತು. ಇದರಲ್ಲಿ ಡೊನೆಟ್ಸ್ಕ್​ ಪ್ರದೇಶದಲ್ಲಿ ಸೈನಿಕರು ಹತರಾಗಿದ್ದಾರೆ ಎಂದು ರಷ್ಯಾದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ, ಬೆರಿಸ್ಲಾವ್ ನಗರದಲ್ಲಿ ನಡೆದ ಶೆಲ್​ ದಾಳಿಯಲ್ಲಿ ಐದು ಉಕ್ರೇನಿಗರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಕ್ರೇನ್​ ತಿಳಿಸಿದೆ. ನಗರದ ಮಾರುಕಟ್ಟೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್​ ಆಡಳಿತ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಬಿ ದಯಾನಂದ್ ಮೆಸೇಜ್ ಮಾಡಿದ್ರು: ಶಾಕಿಂಗ್ ಸತ್ಯ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ

Arecanut price today: ಅಡಿಕೆ ಬೆಳೆಗಾರರಿಗೆ ಶಾಕ್, ಇಂದಿನ ಬೆಲೆ ಎಷ್ಟಾಗಿದೆ ನೋಡಿ

11 years for Modi Govt: ಏನೂ ಮಾಡಿಲ್ಲ ಪ್ರಚಾರದಿಂದಲೇ ಬದುಕಿರೋದು ಎಂದ ಸಿದ್ದರಾಮಯ್ಯ

Indore Couple murder: ಮದುವೆ ಇಷ್ಟ ಇಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಯಾಕೆ ಮಾಡ್ತೀರಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments