ಎರಡು ಅಪರಾಧ ಬಯಲು! ಮೃತನ ಮಗಳು ಪ್ರಗ್ನೆಂಟ್?

Webdunia
ಶುಕ್ರವಾರ, 10 ಡಿಸೆಂಬರ್ 2021 (13:53 IST)
ಬೆಂಗಳೂರು : ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಭದ್ರತಾ ಸಿಬ್ಬಂದಿ ದೀಪಕ್ ಕುಮಾರ್(46)ಕೊಲೆ ಪ್ರಕರಣಕ್ಕೆ ಸಂಬಂಧಿ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ.

ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರೇ ಶಾಕ್ ಆಗಿದ್ದಾರೆ. ಒಂದು ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಇನ್ನೆರಡು ಅಪರಾಧ ಕೃತ್ಯ ಬಯಲಾಗಿದೆ.
ಯಲಹಂಕ ನ್ಯೂಟೌನ್ನ ಅಟ್ಟೂರು ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಕಳೆದ ತಿಂಗಳ ನವೆಂಬರ್ 22 ರಂದು ಜಿಕೆವಿಕೆ ಸೆಕ್ಯೂರಿಟಿ ಗಾರ್ಡ್ ದೀಪಕ್ ಕುಮಾರ್ ಸಿಂಗ್ ಕೊಲೆ ನಡೆದಿತ್ತು. ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ಪೊಲೀಸರಿಗೆ ಕೊಲೆಯ ಅಸಲಿ ಸತ್ಯ ಗೊತ್ತಾಗಿದೆ. ಒಟ್ಟು ನಾಲ್ವರು ದೀಪಕ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಈ ಕೇಸ್ ಸಂಬಂಧ ಪೊಲೀಸರು ಮೃತ ದೀಪಕ್ ಮಗಳ ಬಳಿ ಮಾಹಿತಿ ಪಡೆಯುವ ವೇಳೆ ಕೊಲೆಯ ಸತ್ಯ ಸಂಗತಿ ಬಯಲಾಗಿದೆ.
ಕೊಲೆ ಕೇಸ್ಗೆ ಸಂಬಂಧಿಸಿ ಪೊಲೀಸರು ಮಾಹಿತಿ ಕೇಳುವಾಗ ನಾಲ್ವರು ಟೂಲ್ಸ್ ಸಮೇತ ಬಂದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದ ಮಗಳು ಉತ್ತರಿಸಿದ್ದಳು. ಈ ವೇಳೆ ಅನುಮಾನಗೊಂಡ ಪೊಲೀಸರು ಟೆಕ್ನಿಕಲ್ ವರ್ಡ್ ಬಳಿಸಿದ ಮಗಳ ಬಳಿ ಕ್ರಾಸ್ ಕ್ವೆಷನಿಂಗ್ ಮಾಡಿದಾಗ ಹತ್ಯೆಯ ರಹಸ್ಯ ಬಯಲಾಗಿದೆ. ತನ್ನ ಕಾಲೇಜು ಗೆಳೆಯರ ಜೊತೆ ಗೂಡಿ ಕೊಲೆ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರ ವಿಚಾರಣೆ ವೇಳೆ ತಂದೆಯ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಮಗಳು ಮಾಹಿತಿ ಬಿಚ್ಚಿಟ್ಟಿದ್ದಾಳೆ. ತಂದೆಯ ನಿರಂತರ ಕಿರುಕುಳಕ್ಕೆ ಬೇಸತ್ತು ಸ್ನೇಹಿತರ ಜೊತೆಗೂಡಿ ಹತ್ಯೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಮಗಳ ಮೇಲೆ ತನ್ನ ಕಾಮಕೃತ್ಯ ತೋರಿಸಿಕೊಂಡಿದ್ದ ತಂದೆ ದೀಪಕ್ ಕುಮಾರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಪೊಕ್ಸೊ ಆ್ಯಕ್ಟ್ ಅಡಿ ಕೊಲೆಯಾದ ನಂತರ ಮೃತನ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವರಾತ್ರಿ ವೇಳೆ ಮೀನು ತಿಂದು ಹಿಂದೂಗಳ ವ್ಯಂಗ್ಯ ಮಾಡಿದ್ರು ತೇಜಸ್ವಿ ಯಾದವ್: ಆಮೇಲೆ ಎಲ್ಲಾ ಸೋಲುಗಳೇ

ದೆಹಲಿಯ ಮಾದರಿಯಲ್ಲೇ ಕಾಶ್ಮೀರದಲ್ಲಿ ಸ್ಪೋಟ, 7 ಸಾವು: ಆದರೆ ಈ ಬಾರಿ ಕಾರಣವೇ ಬೇರೆ video

ಸೋತರೂ ಭಾರತೀಯರ ಹೃದಯದಲ್ಲಿದ್ದೀರಿ: ರಾಹುಲ್ ಗಾಂಧಿಗೆ ಕಾಂಗ್ರೆಸ್ ಬೆಂಬಲಿಗರ ಪೋಸ್ಟ್

Karnataka Weather: ವಾರಂತ್ಯದಲ್ಲಿ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments