Select Your Language

Notifications

webdunia
webdunia
webdunia
Sunday, 13 April 2025
webdunia

ತಾತಪ್ಪನನ್ನು ಮದುವೆಯಾಗಲು ಬಂದಿದ್ದ ಆಂಟಿ ಆಭರಣ ಸಮೇತ ಎಸ್ಕೇಪ್

ಮದುವೆ
ಶಿವಮೊಗ್ಗ , ಗುರುವಾರ, 9 ಡಿಸೆಂಬರ್ 2021 (10:19 IST)
ಶಿವಮೊಗ್ಗ: ಮರು ಮದುವೆಯಾಗಲು ಹೊರಟಿದ್ದ 60 ವರ್ಷದ ವೃದ್ಧನಿಗೆ ಆಂಟಿಯೊಬ್ಬಳು ಪಂಗನಾಮ ಹಾಕಿ, ತಾಳಿ, ಆಭರಣ ಸಮೇತ ಎಸ್ಕೇಪ್ ಆದ ಘಟನೆ ನಡೆದಿದೆ.

ಕೆಲವು ತಿಂಗಳುಗಳ ಹಿಂದೆ 60 ವರ್ಷದ ನಂಜುಡಪ್ಪ ಎಂಬವರ ಪತ್ನಿ ತೀರಿಕೊಂಡಿದ್ದಳು. ಈ ವಯಸ್ಸಿನಲ್ಲಿ ಒಂಟಿಯಾಗಿ ಬದುಕುವುದು ಕಷ್ಟವೆಂದು ತಾತ ಇನ್ನೊಂದು ಮದುವೆಯಾಗಲು ವೈವಾಹಿಕ ಅಂಕಣ ಮೂಲಕ ವಧು ಕಂಡುಕೊಂಡಿದ್ದರು.

ಅದರಂತೆ ಸಿಗಂದೂರು ದೇವಾಲಯದಲ್ಲಿ ಮದುವೆಗೆ ಎಲ್ಲಾ ಸಿದ್ಧತೆಯೂ ಆಗಿತ್ತು. ಆದರೆ ಅಲ್ಲಿಗೆ ಹೋದಾಗ ಮದುವೆಗೆ ಅವಕಾಶವಿಲ್ಲ ಎಂದರಂತೆ. ಹೀಗಾಗಿ ಇಬ್ಬರೂ ಶಿವಮೊಗ್ಗಕ್ಕೆ ವಾಪಸಾಗಿದ್ದರು. ಬಸ್ ನಿಲ್ದಾಣದಲ್ಲಿ ನಂಜುಂಡಪ್ಪ ಬೈಕ್ ತರಲು ಹೋದಾಗ ಊಟ ಮಾಡಿ ಬರ್ತೀನಿ ಎಂದು ಹೋಗಿದ್ದ ವಧು ತಾಳಿ, ಕೈ ಬಳೆ, ಕಾಲುಂಗುರ ಸೇರಿದಂತೆ ಆಭರಣ, ರೇಷ್ಮೆ ಸೀರೆ ಸಮೇತ ಕಾಲ್ಕಿತ್ತಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೈಡ್ ರೈಸ್ ನಲ್ಲಿ ವಿಷವಿಕ್ಕಿ ಹೆಂಡತಿ-ಮಕ್ಕಳನ್ನು ಕೊಂದ ಪಾಪಿ