ದನಕ್ಕೆ ಚಿನ್ನದ ಹಾರ ಹಾಕಿ ಫಜೀತಿ! ಮೂಕಪಶುವಿನ ವೇದನೆ ಹೇಳತೀರದು!

Webdunia
ಶುಕ್ರವಾರ, 10 ಡಿಸೆಂಬರ್ 2021 (10:31 IST)
ಕಾರವಾರ: ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡುವಾಗ ದನದ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುವುದು ನಮಗೆಲ್ಲಾ ಗೊತ್ತಿದೆ. ಆದರೆ ಇಲ್ಲೊಂದು ಕುಟುಂಬ ದನಕ್ಕೆ ಚಿನ್ನದ ಹಾರ ಹಾಕಿ ಫಜೀತಿಗೆ ಸಿಲುಕಿಕೊಂಡಿತ್ತು.

ಶ್ರೀಕಾಂತ್ ಹೆಗಡೆ ಎಂಬವರು ತಮ್ಮ ಮನೆಯ ದನದ ಕುತ್ತಿಗೆಗೆ ಚಿನ್ನದ ಹಾರ ಹಾಕಿದ್ದರು. ಮರುದಿನ ಹಾರ ಹುಡುಕಿದರೂ ಸಿಗಲಿಲ್ಲ. ಕೆಲವು ದಿನ ದನದ ಸೆಗಣಿ ನೋಡುವುದೇ ಕೆಲಸವಾಗಿತ್ತು. ನುಂಗಿದ್ದರೆ ಸೆಗಣಿ ಮೂಲಕ ಹಾರ ಹೊರಬಹುದೆಂದು ಕಾದರು.

ಆದರೆ ಬರದೇ ಹೋದಾಗ ಪಶುವೈದ್ಯರನ್ನು ಸಂಪರ್ಕಿಸಿದರು. ಪಶು ವೈದ್ಯರು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ದನದ ಹೊಟ್ಟೆಯಲ್ಲಿ ಸರ ಇರುವುದು ಕಂಡುಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರತೆಗೆಯಲಾಯಿತು. ಆಗ ಸರದ ಒಂದು ತುಂಡು ಕಾಣಲಿಲ್ಲ. ಮತ್ತೆ ಕರುವಿನ ಹೊಟ್ಟೆಯನ್ನು ಪರಿಶೀಲಿಸಿದಾಗ ಇನ್ನೊಂದು ತುಂಡು ಕರುವಿನ ಹೊಟ್ಟೆಯಲ್ಲಿರುವುದು ತಿಳಿದುಬಂದಿದೆ. ಇದೀಗ ಎರಡನ್ನೂ ಹೊರತೆಗೆಯಲಾಗಿದ್ದು, ಚಿನ್ನದ ಹಾರ ಹಾಕಿಸಿಕೊಂಡು ಪಶುವಿನ ನೋವು ಮಾತ್ರ ಯಾರಿಗೂ ಹೇಳಲಾಗದ ಸ್ಥಿತಿಯಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಲ್ಲ ದಲಿತ ಸಚಿವರ ಹೆಸರು ಕೆಡಿಸಲು ಪ್ರಯತ್ನ: ಡಿಕೆ ಶಿವಕುಮಾರ್

ವಲಸೆ ಬಂದ ಹಕ್ಕಿಗಳಿಗೆ ಹೀಗಾಗುವುದಾ, ಅಸ್ಸಾಂ ಜಿಲ್ಲೆಯಲ್ಲಿ ನಿಜವಾಗ್ಲೂ ಆಗಿದ್ದೇನು

ಹೆಂಡ್ತಿ ಜತೆ ರೋಮ್ಯಾಂಟಿಕ್ ರೀಲ್ ಮಾಡಲು ಹೋಗಿ ಸಂಕಷ್ಟ ತಂದುಕೊಂಡ ಪೊಲೀಸ್ ಅಧಿಕಾರಿ, ಆಗಿದ್ದೇನು ಗೊತ್ತಾ

ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿಕೆ ಶಿವಕುಮಾರ್, Video

ನಿಪಾ ವೈರಸ್ ಹರಡುವಿಕೆ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

ಮುಂದಿನ ಸುದ್ದಿ
Show comments