Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದಳು!

ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದಳು!
ಬೆಂಗಳೂರು , ಶುಕ್ರವಾರ, 10 ಡಿಸೆಂಬರ್ 2021 (10:05 IST)
ಬೆಂಗಳೂರು: ಕೆಲವು ಮಕ್ಕಳು ಮನೆಗೇ ಮಾರಿಯಾಗುತ್ತಾರೆ. ಅಂತಹದ್ದೇ ಒಂದು ಘಟನೆ ರಾಜ್ಯ  ರಾಜಧಾನಿಯಲ್ಲಿ ನಡೆದಿದೆ.
 

ಹಣಕ್ಕಾಗಿ ತನ್ನ ಬಾಯ್ ಫ್ರೆಂಡ್‍ ಜೊತೆ ಸೇರಿಕೊಂಡು ಯುವತಿಯೊಬ್ಬಳು ತನ್ನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾಳೆ. ಮನೆಯಲ್ಲಿದ್ದ ಚಿನ್ನ, ನಗದು ದೋಚಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಬಗ್ಗೆ ತಂದೆಯೇ ದೂರು ನೀಡಿದ್ದರು.

ವರಮಹಾಲಕ್ಷ್ಮಿ ಪೂಜೆಗೆಂದು ನಗ, ನಗದು ತೆಗೆದು ಬಳಿಕ ಕಬೋರ್ಡ್ ನಲ್ಲಿ ಇರಿಸಲಾಗಿತ್ತು. ಇದೆಲ್ಲಾ ತಿಳಿದಿದ್ದ ಮಗಳೇ ಹಣದ ಆಸೆಗೆ ಬಾಯ್ ಫ್ರೆಂಡ್ ಜೊತೆ ಸೇರಿಕೊಂಡು ಕಳೆದ ತಿಂಗಳ ಅಂತ್ಯಕ್ಕೆ ಕಳ್ಳತನ ಮಾಡಿದ್ದಾಳೆ. ಈ ಸಂಬಂಧ ತನಿಖೆಯಿಂದ ಸತ್ಯ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಮಿಕ್ರಾನ್ ಎಷ್ಟು ವೇಗವಾಗಿ ಹರಡುತ್ತಿದೆ..?