Publish Date: Mon, 25 Nov 2019 (19:34 IST)
Updated Date: Mon, 25 Nov 2019 (19:35 IST)
ಒಬ್ಬಳನ್ನೇ ಪ್ರೀತಿಸುತ್ತಿದ್ದ ಇಬ್ಬರು ಹುಡುಗರು ಮಾಡಬಾರದ್ದನ್ನು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಇಬ್ಬರು ಸ್ನೇಹಿತರು ಲವ್ ಮಾಡ್ತಿದ್ದರು. ಆದರೆ ಹುಡುಗಿ ವಿಷ್ಯ ಗೆಳೆತನಕ್ಕೆ ಕೊಳ್ಳಿ ಇಟ್ಟಿದ್ದಲ್ಲದೇ ಗೆಳೆಯನೊಬ್ಬನ ಕಥೆ ಫಿನಿಷ್ ಮಾಡಿದೆ.
ಕೊಲೆಯಾದ ಪ್ರದೀಪ್ ಎಂಬಾತನನ್ನು ನೋಡಲು ವಿಜಯ್ ಬಂದಿದ್ದರು. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸಣ್ಣಕ್ಕಿ ಬಯಲಿನಲ್ಲಿ ಲವ್ ಮ್ಯಾಟರ್ ಗೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.
ಆಗ ವಿಜಯ್ ತನ್ನ ಗೆಳೆಯನಾದ ಪ್ರದೀಪ್ (25) ನನ್ನು ಕೊಲೆ ಮಾಡಿದ್ದಾನೆ. ಹುಡುಗಿಯ ಪ್ರೀತಿ ವಿಷಯಕ್ಕೆ ಯುವಕ ಅಮಾನುಷವಾಗಿ ಕೊಲೆಯಾಗಿ ಹೋಗಿದ್ದಾನೆ.