Publish Date: Sun, 24 Nov 2019 (17:30 IST)
Updated Date: Sun, 24 Nov 2019 (17:43 IST)
ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ಆದರೆ ಈಚೆಗೆ ನಾವಿಬ್ಬರೂ ಗೋವಾಗೆ ಹೋಗಿದ್ದೇವು. ಅಲ್ಲಿನ ಲಾಡ್ಜ್ ನಲ್ಲಿ ತಂಗಿದ್ದಾಗ ತುಂಬಾ ಎಂಜಾಯ್ ಮಾಡಿದೆವು. ಆದರೆ ರಾತ್ರಿ ನನ್ನ ಹುಡುಗಿ ರೋಮ್ಯಾನ್ಸ್ ಮಾಡಿದ್ರೆ ಖುಷಿ ಪಡುತ್ತಾಳೆ.
ಆದರೆ ಪ್ರತಿ ಬಾರಿ ಸಮಾಗಮ ನಡೆಸೋವಾಗ ಕಾಂಡೋಮ್ ಬೇಡ ಅಂತಿದ್ದಾಳೆ. ಇದರಿಂದ ಆಕೆ ಗರ್ಭಿಣಿಯಾದರೆ ಮುಂದೆ ಹೇಗೆ ಅನ್ನೋ ಚಿಂತೆಯಲ್ಲಿ ನನಗೆ ಸುಖ ಸರಿಯಾಗಿ ಸಿಗುತ್ತಿಲ್ಲ.
ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ ತಪ್ಪು ಕಾಣುತ್ತಿಲ್ಲ. ಏಕೆಂದರೆ ಹರೆಯದಲ್ಲಿ ಮಾಡಿದ ತಪ್ಪಿಗೆ ಗರ್ಭ ಧರಿಸಿ ಮದುವೆಗೂ ಮೊದಲೇ ತೊಂದರೆ ಪಡುವುದು ಆಕೆಗೆ ಮಾತ್ರವಲ್ಲ, ಬಹುತೇಕ ವಿವೇಕವುಳ್ಳವರಿಗೆ ಇಷ್ಟ ಇರುವುದಿಲ್ಲ. ಆದರೂ ಅವಳು ನಿಮ್ಮ ಮಗುವಿಗೆ ತಾಯಿ ಆಗೋಕೆ ರೆಡಿ ಇದ್ದಾಳೆ ಎಂದರೆ ಅವಳು ನಿಮ್ಮನ್ನು ಗಾಢವಾಗಿ ಪ್ರೀತಿ ಮಾಡುತ್ತಿದ್ದಾಳೆ ಎಂದರ್ಥ.
ಅದನ್ನು ಕೇವಲ ಕಾಮಕ್ಕಾಗಿ ಮಾತ್ರ ಪರಿಗಣಿಸಬೇಡಿ. ಒಳ್ಳೆಯ ಮನಸ್ಸಿನಿಂದ ಪ್ರೀತಿ ಮಾಡಿ ಮೊದಲು ಆಕೆಯನ್ನು ಮದುವೆಯಾಗಿ. ಆ ಬಳಿಕ ಆ ಯುವತಿ ನಿಮ್ಮ ಜತೆ ಸುಖವಾಗಿರುತ್ತಾಳೆ.