Publish Date: Mon, 25 Nov 2019 (19:13 IST)
Updated Date: Mon, 25 Nov 2019 (19:14 IST)
ಮತದಾರರಿಗೆ ಬಿಜೆಪಿಯವರು ಬಾಡೂಟ, ಸೀರೆಗಳನ್ನು ಹಂಚುತ್ತಿದ್ದಾರೆ. ಹೀಗಂತ ಕೈ ಪಡೆ ಅಭ್ಯರ್ಥಿ ಆರೋಪ ಮಾಡಿದ್ದಾರೆ.
ಎರಡು ಬಾರಿ ಶಾಸಕನಾಗಿದ್ದಾಗ ಮಾಡಿರೋ ಅಭಿವೃದ್ಧಿ ನೋಡಿ ನನಗೆ ಮತ ಹಾಕಿ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ
ಕೆ. ಬಿ. ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಮಂಡ್ಯದ ಕಸಬಾ ಮತ್ತು ಕಿಕ್ಕೇರಿ ಹೋಬಳಿಯ ಮಾಕವಳ್ಳಿ, ಬಂಡಿಹೊಳೆ, ಚೌಡೇನಹಳ್ಳಿ, ಐಕನಹಳ್ಳಿ ಮೊದಲಾದೆಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ರು.
ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಬಿ ಚಂದ್ರಶೇಖರ್ ಬಿರುಸಿನ ಪ್ರಚಾರ ನಡೆಸಿದ್ರು.
ಬಿಜೆಪಿಯವರ ದುಡ್ಡು ಹಾಗೂ ಪ್ರತಿಯೊಂದನ್ನೂ ಪಡೆದುಕೊಳ್ಳಿ. ಆದರೆ ಮತವನ್ನು ಕಾಂಗ್ರೆಸ್ ಹಾಕಿ ಎಂದು ಕೋರಿದ್ರು.