Publish Date: Mon, 25 Nov 2019 (15:53 IST)
Updated Date: Mon, 25 Nov 2019 (15:56 IST)
ರಾಜ್ಯದ ಉಪಚುನಾವಣಾ ಪ್ರಚಾರದಲ್ಲಿ ಡಿಸಿಎಂವೊಬ್ಬರು ಮಾಜಿ ಸಿಎಂಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯ ಶ್ರೀಮಂತ ಪಾಟೀಲ ಮಾತನಾಡಿ, ಹೆಚ್ ಡಿ ಕೆ ಆಡಳಿತ ಸರಿ ಇರಲಿಲ್ಲ ಅಂತ ದೂರಿದ್ದಾರೆ. ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅಥಣಿ ತಾಲೂಕಿನ ಗುಂಡೇವಾಡಿ, ಪಾರ್ಥನಳ್ಳಿ, ಚಮಕೇರಿ, ಬಳ್ಳಿಗೇರಿ ಮೊದಲಾದ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ನನಗೆ ಬಣ್ಣದ ಮತ್ತು ಅಲಂಕಾರದ ಮಾತುಗಳು ಬರುವದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸ್ಪಂದನೆ ಸಿಗದ ಕಾರಣ ಜನರಿಗೆ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ ಸ್ವಾಭಿಮಾನದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕಾಯಿತು ಎಂದರು.
ಡಿಸಿಎಮ್ ಲಕ್ಷ್ಮಣ ಸವದಿ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿದ್ದರು. ಅವರನ್ನು ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿ ಎಮ್ ಆಗಿದ್ದೀರೊ ಎಂದು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿತ್ತು ಅಂತ ಟಾಂಗ್ ನೀಡಿದ್ರು.